ನೇಪಾಳ: ಭಾರೀ ಮಳೆ, ಭೂಕುಸಿತದಲ್ಲಿ 5 ಮಂದಿ ಮೃತ್ಯು, 28 ಮಂದಿ ನಾಪತ್ತೆ

ಕಠ್ಮಂಡು: ನೆರೆಯ ದೇಶ ಕಠ್ಮಂಡುವಿನ ವಿವಿಧೆಡೆ  ಶನಿವಾರ ರಾತ್ರಿಯಿಂದಾಗುತ್ತಿರುವ  ಭಾರೀ ಮುಂಗಾರು ಮಳೆಯಿಂದಾಗಿ ಉಂಟಾದ ಭೂ ಕುಸಿತದಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದು, 28 ಮಂದಿ ನಾಪತ್ತೆಯಾಗಿದ್ದಾರೆ. ಕೋಶಿ ಪ್ರಾಂತ್ಯದ ಗುಡ್ಡಗಾಡು ಜಿಲ್ಲೆಗಳಾದ ಸಂಖುವಸಭಾ, ಪಂಚತಾರ್ ಮತ್ತು ತಾಪ್ಲೆಜಂಗ್ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯುಂಟಾಗಿದೆ.  ಸಂಖುವಾಸಭಾದ ಪಂಚಖಾಪಾನ್ ಪುರಸಭೆ-9 ರ ಸಂತೋಷ್ ರೈ ಅವರು ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. 

ನಿರ್ಮಾಣ ಹಂತದಲ್ಲಿರುವ ಸೂಪರ್ ಹೆವಾ ಜಲವಿದ್ಯುತ್ ಯೋಜನೆ ಪ್ರವಾಹದಿಂದಾಗಿ ಹಾನಿಯಾಗಿದೆ. ಆರು ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುವ 18 ಜನರು ಸಂಪರ್ಕದಲ್ಲಿಲ್ಲ, ಕಾಣೆಯಾದವರ ಹುಡುಕಾಟ ನಡೆಯುತ್ತಿದೆ.  ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬೀರೇಂದ್ರ ಗೋದರ್ ತಿಳಿಸಿದ್ದಾರೆ. 

ಸಂಖುವಾಸಭಾದಲ್ಲಿ ಪ್ರವಾಹದಿಂದಾಗಿ ಎಂಟು ಮನೆಗಳು ಮತ್ತು ಸೇತುವೆಯೊಂದು ನೀರಿನಲ್ಲಿ ಮುಳುಗಡೆಯಾಗಿದೆ. ಈ ಪ್ರದೇಶದಲ್ಲಿನ ಹೆಕ್ಟೇರ್‌ಗಳಷ್ಟು ಕೃಷಿ  ಭೂಮಿ ಹಾನಿಯಾಗಿದೆ. ಪ್ರವಾಹದ ಪ್ರತ್ಯೇಕ ಘಟನೆಗಳಲ್ಲಿ ಮೂವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದೇ ರೀತಿ ಸಭಾಪೋಖರಿ ಗ್ರಾಮಾಂತರ ಪ್ರದೇಶದಲ್ಲೂ  ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ನೇಪಾಳ ಸೇನೆ, ನೇಪಾಳ ಪೊಲೀಸರು ಮತ್ತು ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. 

Latest Indian news

Popular Stories