ʼಬಿ.ಡಬ್ಲ್ಯು.ಎಫ್. ಸಾಮೂಹಿಕ ವಿವಾಹʼಕ್ಕೆ ಅರ್ಜಿ ಆಹ್ವಾನ

ಆರ್ಥಿಕವಾಗಿ ತೀರಾ ಹಿಂದುಳಿದಿರುವ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬ್ಯಾರೀಸ್‌ ವೆಲ್ಫೇರ್‌ ಫೋರಂ (ಬಿ.ಡಬ್ಲ್ಯು.ಎಫ್.), ಅಬುಧಾಬಿ 2024ರ ಫೆಬ್ರವರಿ 17ರಂದು ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಗಂಜಿಮಠದಲ್ಲಿರುವ ‘ಝಾರಾ ಕನ್ವೆಂಶನ್‌ ಸೆಂಟರ್’ನಲ್ಲಿ* ತನ್ನ ಎಂಟನೇ ‘ಸರಳ ಸಾಮೂಹಿಕ ವಿವಾಹ’ ಸಮಾರಂಭವನ್ನು ಹಮ್ಮಿಕೊಂಡಿದ್ದು, ಆಸಕ್ತ ವಧುವಿನ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವಾಸವಾಗಿರುವ ವಧುವಿನ ಕುಟುಂಬಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಆಯ್ದ ವಧುವಿಗೆ ಮದುವೆಯ ವಸ್ತ್ರ, ನಾಲ್ಕು ಪವನ್ ಚಿನ್ನಾಭರಣ ಹಾಗೂ ಮದುವೆಯ ಖರ್ಚನ್ನು ಬ್ಯಾರೀಸ್‌ ವೆಲ್ಫೇರ್‌ ಫೋರಂ ಭರಿಸಲಿದೆ. ಅನಾಥ, ಅಂಗವಿಕಲ, ಆರ್ಥಿಕ ಸಂಕಷ್ಟ ಹಾಗೂ ಮದುವೆಯ ವಯಸ್ಸು ಮೀರಿರುವ ವಧುವಿಗೆ ಆಧ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ಡಿಸೆಂಬರ್‌ 31 ಕೊನೆಯ ದಿನಾಂಕವಾಗಿದ್ದು,ಆಸಕ್ತರು ನಿಗದಿತ ಅರ್ಜಿ ನಮೂನೆ ಪಡೆಯಲು ಉಮರ್‌ ಯು. ಹೆಚ್.‌ ಸಂಚಾಲಕರು, ಬಿ.ಡಬ್ಲ್ಯು.ಎಫ್.‌ ಸಾಮೂಹಿಕ ವಿವಾಹ ಸಂಘಟನಾ ಸಮಿತಿ, ಎಲ್‌ಎಕ್ಸ್‌ಎಂ ಸೀ ಫುಡ್‌ ಎಕ್ಸ್‌ಪೋರ್ಟ್ಸ್, ನಂ. 14, ಒಂದನೇ ಮಹಡಿ, ಅಡೋನೈ ಟವರ್ಸ್‌, ಕಂಕನಾಡಿ ರಸ್ತೆ, ಹೈಲ್ಯಾಂಡ್‌ ಆಸ್ಪತ್ರೆ ಬಳಿ, ಮಂಗಳೂರು – 575002, ದೂರವಾಣಿ ಸಂ. 9845054191 ಅನ್ನು ಸಂಪರ್ಕಿಸಬಹುದು ಎಂದು ಅಬುಧಾಬಿಯ *ಬ್ಯಾರೀಸ್‌ ವೆಲ್ಫೇರ್‌ ಫೋರಂ ನ ಅಧ್ಯಕ್ಷ ಮುಹಮ್ಮದ್‌ ಅಲಿ ಉಚ್ಚಿಲ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories