ರಾಯಚೂರು : ವ್ಯಕ್ತಿಯೊಬ್ಬರಿಗೆ ಕಂಬಕ್ಕೆ ಕಟ್ಟಿ ಥಳಿತ, ಓರ್ವ ವ್ಯಕ್ತಿ ಅರೆಸ್ಟ್!

ರಾಯಚೂರು: ಹತ್ತು ಜನರ ಗುಂಫೊಂದು ಓರ್ವ ವ್ಯಕ್ತಿಯನ್ನು ಎಳೆದಾಡಿ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಚಿಕ್ಕಬೆರಗಿ ಗ್ರಾಮದಲ್ಲಿ ನಡೆದಿದೆ.

ಅದೇ ಗ್ರಾಮದ ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ಆರೋಪಿಸಿ ಗುಂಪು ವ್ಯಕ್ತಿ ಮೇಲೆ ಹಲ್ಲೆ ನಡೆಸಿದೆ.ಸಂತ್ರಸ್ತೆ ತನ್ನನ್ನು ಬಿಡುವಂತೆ ದಾಳಿಕೋರರಲ್ಲಿ ಮನವಿ ಮಾಡಿದರೂ, ಆರೋಪಿಗಳು ಆತನನ್ನು ಹಗ್ಗದಿಂದ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ.

ಈ ಘಟನೆ ಜನವರಿ 20ರಂದು ನಡೆದಿದೆ. ಆತನ ಪತ್ನಿ ನಾಗಮ್ಮ ರಕ್ಷಿಸಲು ಯತ್ನಿಸಿದಾಗ ಆಕೆಯ ಮೇಲೂ ಚಪ್ಪಲಿ, ದೊಣ್ಣೆಗಳಿಂದ ಥಳಿಸಿ, ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ನಿಂಗಪ್ಪ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಚಿಕಿತ್ಸೆಗಾಗಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಆರೋಪಿಗಳ ಪ್ರಕಾರ, ನಿಂಗಪ್ಪ ಅದೇ ಗ್ರಾಮದ ಮಹಿಳೆಯನ್ನು ಕೆಟ್ಟದಾಗಿ ನಿಂದಿಸಿದ್ದಾನೆ. ಇದು ಆತನ ಮೇಲೆ ಹಲ್ಲೆಗೆ ಕಾರಣವಾಗಿದೆ. ಆದರೆ ಈ ಆರೋಪವನ್ನು ನಿಂಗಪ್ಪ ಹಾಗೂ ಆತನ ಕುಟುಂಬಸ್ಥರು ಅಲ್ಲಗಳಿದಿದ್ದಾರೆ.

ನಿಂಗಪ್ಪ ಹೊಲದಿಂದ ಮನೆಗೆ ತೆರಳುತ್ತಿದ್ದ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಂಬಕ್ಕೆ ಕಟ್ಟಿ ಹಾಕಿ ಕಲ್ಲು, ಕಟ್ಟಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಅಲ್ಲದೇ ಜಗಳ ಬಿಡಿಸಲು ಬಂದ ಪತ್ನಿ ನಿಂಗಮ್ಮ ಅವರ ಸೀರೆ ಎಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಜೀವಬೆದರಿಕೆ ಹಾಕಿದ್ದರೆ ಎಂದು ತುರ್ವಿಹಾಳ ಪೋಲಿಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ನಿಂಗಮ್ಮ ನಮೋದಿಸಿದ್ದಾರೆ.

Latest Indian news

Popular Stories