ಸ್ವಾತಂತ್ರö್ಯದ ಹೋರಾಟಕ್ಕೆ ಗಾಂಧೀಯೇ ಪ್ರೇರಣೆ: ಪಂಪಣ್ಣ

ರಾಯಚೂರು, ಜೂ.೨೭ (ಕ.ವಾ):- ಸ್ವಾತಂತ್ರö್ಯ ಸಂಗ್ರಾಮದ ಹೋರಾಟಕ್ಕೆ ಮಹತ್ಮಾ ಗಾಂಧಿಜೀಯವರೇ ಪ್ರೇರಣೆಯಾಗಿದ್ದರು. ಅಂದು ಅವರ ಕುರಿತು ಚಾಲ್ತಿಯಲ್ಲಿದ್ದ ದಂತ ಕತೆಗಳು ಮತ್ತಷ್ಟು ಪ್ರೋತ್ಸಾಹದಾಯಕವಾಗಿದ್ದವು ಎಂದು ಸ್ವಾತಂತ್ರö್ಯ ಹೋರಾಟಗಾರ ಡಿ. ಪಂಪಣ್ಣ ಅವರು ಅಭಿಪ್ರಾಯ ಪಟ್ಟರು.

ಅವರು ಜೂ.೨೭ರ ಭಾನುವಾರ ನಗರದ ಮಲಿಯಾಬಾದ್ ಟ್ರೀಪಾರ್ಕ್ನಲ್ಲಿ ಜಿಲ್ಲಾ ಅರಣ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರೊö್ತÃತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಗಾಂಧಿಜೀಯವರ ನಾಯಕತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರö್ಯ ಹೋರಾಟದ ಕುರಿತು ಹಲವು ವಿಚಾರಗಳನ್ನು ಮನೆಯಲ್ಲಿ ಚರ್ಚಿಸಲಾಗುತ್ತಿತ್ತು. ಅಲ್ಲದೇ ಹಲವು ದಂತಕತೆಗಳು ಪ್ರಚಲಿತದಲ್ಲಿದ್ದವು. ಹದಿಹರೆಯದ ವಯಸ್ಸಿನಲ್ಲಿ ಅವು ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದ ಕಾರಣ ಸ್ವಾತಂತ್ರö್ಯದ ಹೋರಾಟಕ್ಕೆ ಧುಮಕಿದೆ ಎಂದು ಹೇಳಿದ ಅವರು, ೧೯೪೭ರ ಆಗಸ್ಟ್ ೧೫ರಂದು ದೇಶಕ್ಕೆ ಸ್ವಾತಂತ್ರö್ಯ ಲಭಿಸಿದರೂ ರಾಯಚೂರಿಗೆ ದೊರೆಯಲಿಲ್ಲ, ನಿಜಾಂ ಆಡಳಿತ ನಿರಾಕರಿಸಿತ್ತು, ಇನ್ನು ಸ್ವಾತಂತ್ರö್ಯದ ಬೆಳಕು ಹರಿಯದ ಕಾರಣ ಅಂದು ಮಟಮಾರಿ ಪರ್ವತ ರೆಡ್ಡಿ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ಇಂದಿನ ಜಿಲ್ಲಾಧಿಕಾರಿ ಕಚೇರಿಯಾಗಿರುವ ಸಾತ್ ಕಚೇರಿ ಮೇಲ್ಭಾಗದಲ್ಲಿ ಹುಡುಗರ ತಂಡವೊAದು ಸೇರಿಕೊಂಡು ರಾಷ್ಟçಧ್ವಜವನ್ನು ಹಾರಿಸಿದ್ದೆವು ಎಂದು ಹೇಳಿದರು.

ಅದೇ ರೀತಿ ಅಕ್ಟೋಬರ್ ೨ ರಂದು ಗಾಂಧೀ ಜಯಂತಿ ಆಚರಣೆಗೂ ಅವಕಾಶವಿರಲಿಲ್ಲ, ಒಂದು ರೀತಿಯ ನಿಷೇಧಾಜ್ಞೆ ಜಾರಿಗೊಂಡಿತ್ತು, ಅಂದು ನಗರದ ರೈಲು ನಿಲ್ದಾಣದಲ್ಲಿ ಗಾಂಧಿಜೀಯವರ ಪೋಟೋ ಇರಿಸಿ, ಹಾರ ಹಾಕಿ ನಮಿಸಲಾಯಿತು ಎಂದು ತಿಳಿಸಿದರು.

ಹೋರಾಟದ ಸಂದರ್ಭದಲ್ಲಿ ಬಂಧನಕ್ಕೊಳಗಾದಾಗ ಸ್ವಾತಂತ್ರ ಪ್ರೇಮಿಗಳು ಜೈಲಿನಲ್ಲಿಯೇ ಊಟ, ಉಪಹಾರ ವಿತರಿಸಿದ್ದನ್ನು ಅವರು ಸ್ಮರಿಸಿದ ಅವರು, ಗಾಂಧಿ ಅವರ ಮಾರ್ಗದರ್ಶನದಲ್ಲಿ ಹೋರಾಟ ರೂಪರೇಷೆಗಳನ್ನು ನಿರ್ಧರಿಸುವುದಲ್ಲಿ ಹೆಜ್ಜೆ ಇಟ್ಟಿದ್ದು, ಹಂತ ಹಂತವಾಗಿ ಸ್ವಾತಂತ್ರ‍್ಯ ಹೋರಾಟದಲ್ಲಿ ಪಾಲ್ಗೊಂಡು ಹಲವು ಬಾರಿ ಜೈಲು ಶಿಕ್ಷೆ ಅನುಭವಿಸಿದ ಘಟನೆಗಳನ್ನು ಅವರು ಎಳೆ ಎಳೆಯಾಗಿ ನೆನಪಿಸಿಕೊಂಡರು

ಉಪ ಅರಣ್ಯ ಸಂರಕ್ಷಾಧಿಕಾರಿ ಚಂದ್ರಣ್ಣ ಮಾತನಾಡಿ, ಸ್ವಾತಂತ್ರö್ಯ ಹೋರಾಟಗಾರರು ನಾಡಿನ ಆಸ್ತಿ, ಅವರಿಂದಲೇ ಇಂದು ನಾವು ಸ್ವಾತಂತ್ರವಾಗಿದ್ದೇವೆ, ಅವರು ಇಂದಿನ ಪೀಳಿಗೆಗೆ ಆದರ್ಶ ಪ್ರಾಯರು ಎಂದು ಹೇಳಿದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಶ್ರೀಧರ್ ಮಾತನಾಡಿ, ಪ್ರತಿ ವರ್ಷ ಜೂನ್ ೫ ರಂದು ಪರಿಸರ ದಿನಾಚರಣೆ ಆಚರಿಸಲಾಗುತ್ತದೆ, ಈ ಬಾರಿಯ ಘೋಷವಾಕ್ಯ ಪರಿಸರ ಪುನಃಶ್ಚೇತನ ಅಂದರೆ, ಪರಿಸರವನ್ನೇ ಚೇತನಗೊಳಿಸುವ ಅನಿವಾರ್ಯತೆ ಇದೀಗ ಎದುರಾಗಿದೆ, ಮುಂದಿನ ಪೀಳಿಗೆಗೆ ಸಮತೋಲನ ಪರಿಸರ ನೀಡಬೇಕಾದಲ್ಲೀ ಪರಿಸರವನ್ನು ಸಂರಕ್ಷಿಸಬೇಕಿದೆ ಎಂದರು.

ಕೋವಿಡ್-೧೯ ಸೋಂಕು ಹಿನ್ನಲೆಯಲ್ಲಿ ಮಾಸ್ಕ್ ಉಪಯೋಗಿಸಿದ ನಂತರ ಅದರ ವಿಲೇವಾರಿಯನ್ನು ಅತ್ಯಂತ ಜಾಗೃತಿಯಿಂದ ನೆರವೇರಿಸಬೇಕು, ಎಲ್ಲೆಂದರೆಲ್ಲಿ ಹಾಕಿದ್ದಲ್ಲೀ ಭೂಮಿ ಹಾಗೂ ಮಾನವನ ಆರೋಗ್ಯಕ್ಕೆ ಹಾನಿ ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಒಂಟೇಕರ್, ವಲಯ ಅರಣ್ಯಾಧಿಕಾರಿ ರಾಜೇಶ್, ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ್, ಅರಣ್ಯ ರಕ್ಷಕರಾದ ಸಂಗಣ್ಣ ಮಿಟ್ಟಿ, ಯಲ್ಲಪ್ಪ, ಮೌನೇಶ್, ಸ್ವಾತಂತ್ರ‍್ಯ ಹೋರಾಟಗಾರರ ಕ್ಷೇಮಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರೆಡ್ ಕ್ರಾಸ್ ಸಂಸ್ಥೆಯ ಶಿಕ್ಷಣ ವಿಭಾಗದ ಜಿಲ್ಲಾ ಸಂಚಾಲಕ ದಂಡಪ್ಪ ಬಿರಾದರ್ ನಿರೂಪಿಸಿದರು.

ಸಸಿ ನೆಟ್ಟ ಹೋರಾಟಗಾರ: ಸ್ವಾತಂತ್ರö್ಯ ಹೋರಾಟಗಾರ ಡಿ. ಪಂಪಣ್ಣ ಅವರು ಜೂ.೨೭ರ ಭಾನುವಾರ ಅವರಣ್ಯ ಇಲಾಖೆಯ ಮಲಿಯಾಬಾದ್ ಟ್ರೀಪಾರ್ಕ್ ಆವರಣದಲ್ಲಿ ಸಿಸಿಯೊಂದನ್ನು ನೆಟ್ಟು, ನಿರೇರೆದರು.
ಇದೇ ಸಂದರ್ಭದಲ್ಲಿ ಅಧಿಕಾರಿಗಳು ಗಿಡಗಳನ್ನು ನೆಟ್ಟರು.

Latest Indian news

Popular Stories