ಎರಡನೇ ಹಂತದ ತರಬೇತಿ: ೭೪ ಮಂದಿ ಗೈರು-ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ

ರಾಯಚೂರು,ಏ.೧೨.(ಕ.ವಾ)- ಜಿಲ್ಲೆಯ ಮಸ್ಕಿ ವಿಧಾನಸಭೆಯ ಉಪ ಚುನಾವಣೆಯ ಮತದಾನ ಇದೇ ಏ.೧೭ರ ಶನಿವಾರ ನಡೆಯುಲಿದ್ದು, ಇದಕ್ಕೆ ಪೂರ್ವಭಾವಿಯಾ ಮಸ್ಕಿ ಪಟ್ಟಣದ ಹೊರವಲಯದಲ್ಲಿರುವ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಎರಡನೇ ಹಂತದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.

ಒಟ್ಟು ೧,೫೬೮ ಮಂದಿಯಲ್ಲಿ ಮತಗಟ್ಟೆಯ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಧಿಕಾರಿ ಸೇರಿದಂತೆ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವಿವಿಪ್ಯಾಟ್ ಹಾಗೂ ಇವಿಎಂಗಳು ಹಾಗೂ ಮತದಾನದ ಪ್ರಾರಂಭ ಹಾಗೂ ಮುಕ್ತಾಯದ ವೇಳೆ ಕೈಗೊಳ್ಳಬೇಕಾದ ಪ್ರಕ್ರಿಯೆಗಳ ಕುರಿತು ಬೆಳಿಗ್ಗೆ ಹಾಗೂ ಮಧ್ಯಾಹ್ನದ ಸೆಷನ್‌ಗಳಲ್ಲಿ ತರಬೇತಿ ನೀಡಲಾಯಿತು.

ಒಟ್ಟು ೪೦ ಮಂದಿ ತರಬೇತುದಾರರು ತರಬೇತಿ ನೀಡಿದರು. ದೇವದುರ್ಗ, ಮಾನವಿ ಹಾಗೂ ರಾಯಚೂರಿನಿಂದ ೧೨ ಕೆ.ಎಸ್.ಆರ್.ಟಿ.ಸಿ ಹಾಗೂ ೧೮ ಶಾಲಾ ವಾಹನಗಳಲ್ಲಿ ಸಿಬ್ಬಂದಿಗಳನ್ನು ಕರೆತರಲಾಗಿತ್ತು.

೭೪ ಮಂದಿ ಗೈರು: ಚುನಾವಣಾ ಮತದಾನಕ್ಕೆ ಸಂಬAಧಿಸಿದAತೆ ನೀಡಲಾದ ಎರಡನೇ ಹಂತದ ತರಬೇತಿಗೆ ಒಟ್ಟು ೭೪ ಸಿಬ್ಬಂದಿಗಳು ಗೈರು ಹಾಜರಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣ ಸಿರುವ ಜಿಲ್ಲಾಡಳಿತ ಈಗಾಗಲೇ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ.

ಅಲ್ಲದೇ ೭೪ ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ನಿರ್ದೇಶನ ನೀಡಿದ್ದಾರೆ ಹಾಗೂ ಇವರು ಏ.೧೬ರಂದು ಮಸ್ಟರಿಂಗ್‌ಗೆ ಕಡ್ಡಾಯವಾಗಿ ಹಾಜರಾಗಲೇಬೇಕು ಎಂದು ರಾಯಚೂರು ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ಅವರು ತಿಳಿಸಿದರು.

ಪರಸ್ಪರ ಸಹಕಾರದಿಂದ ಚುನವಣಾ ಕಾರ್ಯ ಯಶಸ್ವಿಯಾಗಲು ಸಾಧ್ಯ, ಹಾಗಾಗಿ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಗಳಲ್ಲಿ ಸಮನ್ವಯತೆ ಅಗತ್ಯ, ಪಿಆರ್‌ಒ, ಎಪಿಆರ್‌ಒ ಸೇರಿದಂತೆ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವವರು ಸೌಹಾರ್ದತೆಯಿಂದ ಕಾರ್ಯನಿರ್ವಹಿಸಬೇಕು.

ಈ ಬಾರಿ ಬೆಳಿಗ್ಗೆ ೭ ರಿಂದ ಸಂಜೆ ೭ ಗಂಟೆಯ ವರೆಗೆ ಅಂದರೆ ೧೨ ತಾಸು ಚುನಾವಣಾ ಮತದಾನಕ್ಕೆ ಆಯೋಗ ಅವಕಾಶ ನೀಡಿದೆ, ಕೋವಿಡ್ ಹಿನ್ನಲೆಯಲ್ಲಿ ಈ ಅವಧಿಯನ್ನು ನಿಗಧಿ ಪಡಿಸಿದೆ, ಎಲ್ಲರೂ ಇದನ್ನು ಗಮನದಲ್ಲಿಟ್ಟುಕೊ¼್ಳಬೇಕು, ಕೆಲವು ಗ್ರಾಮಗಳಲ್ಲಿನ ಮತಗಟ್ಟೆಯಲ್ಲಿ

೪೦೦ ರಿಂದ ೪೫೦ ಮತದಾರರಿದ್ದು, ಮತಹಾಕಿದವರೆಲ್ಲರೂ ಪೂರ್ಣಗೊಂಡಿದ್ದಾರೆ ಎಂದು ನಿಗದಿ ಪಡಿಸಿದ ಅವಧಿಗೂ ಮೊದಲೇ ಎಲ್ಲವನ್ನೂ ಪ್ಯಾಕ್ ಮಾಡಿ ಹೊರಡುವಂತಿಲ್ಲ, ಚುನಾವಣಾ ಆಯೋಗ ನಿಗದಿ ಪಡಿಸಿದ ಸಮಯವನ್ನೇ ಪಾಲಿಸಬೇಕು ಎಂದರು.

ವಿವಿಪ್ಯಾಟ್‌ಅನ್ನು ಅತ್ಯಂತ ಸೂಕ್ಷö್ಮವಾದ ಉಪಕರಣ. ಅದನ್ನು ಅತ್ಯಂತ ನಾಜೂಕಾಗಿ ಉಪಯೋಗಿಸಬೇಕು, ವಿವಿಪ್ಯಾಟ್‌ನಿಂದ ಮೊದಲಿಗೆ ಎಲ್ಲ ವೋಚರ್‌ಗಳನ್ನು ಹೊರಗೆ ತೆಗೆಯಬೇಕು, ಇದನ್ನು ಖಚಿತವಾಗಿ ಖಾತರಿ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಂತ್ರಿಕ ದೋಷಗಳು ಕಂಡುಬAದಲ್ಲೀ ಕೂಡಲೇ ಗಮನಕ್ಕೆ ತರಬೇಕು, ವಿವಿಪ್ಯಾಟ್‌ಗಳು ಹೆಚ್ಚಿನ ಸಂಖ್ಯೆಯಲಿದ್ದು, ಕೂಡಲೇ ಪರ್ಯಾಯವಾಗಿ ಒದಗಿಸಿಕೊಡಲಾಗುವುದು ಎಂದರು.

ಜಿಲ್ಲಾ ಚುನಾವಣಾಧಿಕಾರಿಗಳೂ ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಹಾಗೂ ಚುನಾವಣಾ ವೀಕ್ಷಕರಾದ ಶ್ರೀಧರ ಬಾಬು ಅಡ್ಡಂಕಿ ಅವರು ತರಬೇತಿ ವೇಳೆ ಭೇಟಿ ನೀಡಿ ಪರಿಶೀಲಿಸಿದರು.

ಚುನಾವಣಾಧಿಕಾರಿ ರಾಜಶೇಖರ ಡಂಬಳ, ತಹಶೀಲ್ದಾರರು, ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Latest Indian news

Popular Stories