ರಾಯಚೂರು : ಬಸ್-ಇನ್ನೋವಾ ಕಾರಿನ ಮಧ್ಯ ಭೀಕರ ಅಪಘಾತ : 2 ಸಾವು 5 ಜನರಿಗೆ ಗಾಯ

ರಾಯಚೂರು : ಬಸ್ ಹಾಗೂ ಇನ್ನೋವಾ ಕಾರಿನ ಮಧ್ಯ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಐವರಿಗೆ ಗಂಭೀರವಾದಂತ ಗಾಯಗಳಗಿರುವ ಘಟನೆ ರಾಯಚೂರು ಜಿಲ್ಲೆಯ ಕಸಬೇ ಕ್ಯಾಂಪ್ ಬಳಿ ನಡೆದಿದೆ.

ನಿನ್ನೆ ತಡರಾತ್ರಿ ಕಸಬೆ ಕ್ಯಾಂಪ್ ಬಳಿ ಖಾಸಗಿ ಬಸ್ ಹಾಗು ಇನ್ನೋವಾ ಕಾರು ನಡುವೆ ಡಿಕ್ಕಿಯಾದ ಪರಿಣಾಮ ಮಾರಿಯಾ ಗೀತಾ (38) ಅಮಲ್ ಪಾಲ್ ಮೇರಿ (64) ಎನ್ನುವವರು ಸಾವನ್ನಪ್ಪಿದ್ದಾರೆ.

ಕಾರಿನಲ್ಲಿದ್ದ ಏಳು ಜನರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಒಂದು ಭೀಕರ ಅಪಘಾತದಲ್ಲಿ ಐವರಿಗೆ ಗಾಯವಾಗಿದ್ದು, ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ರಾಯಚೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Latest Indian news

Popular Stories