ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ
ಭಾರತ್ ಜೋಡೊ ಯಾತ್ರೆಯ ಮೂಲಕ ದ್ವೇಷದ ಅಂಗಡಿಯಲ್ಲಿ ಪ್ರೀತಿ ಹಂಚುವ ಕೆಲಸ ಕರ್ನಾಟಕದಲ್ಲಿ ಯಶಸ್ವಿಯಾಗಿದ್ದು, ಮುಂದೆ ದೇಶದಾದ್ಯಂತ ಇದು ಪಸರಿಸಲಿದೆ ಎಂದು ಕೆಪಿಸಿಸಿ ಉಡುಪಿ ಜಿಲ್ಲಾ ಉಸ್ತುವರಿ ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ನಗರದಲ್ಲಿ ಆಯೋಜಿಸಿದ ಪಾದಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಮೇಶ್ ಕಾಂಚನ್, ಉಡುಪಿ, ಶಂಕರ್ ಕುಂದರ್, ಕೊಟ, ನವೀನ್ ಚಂದ್ರ ಸುವರ್ಣ, ಕಾಪು, ಸಂತೋಷ್ ಕುಲಾಲ್ ಪೆರ್ಡೂರು, ಹರಿಪ್ರಸಾದ್ ಶೆಟ್ಟಿ ಕುಂದಾಪುರ, ಸದಾಶಿವ ದೇವಾಡಿಗ ಕಾರ್ಕಳ, ಮುಖಂಡರುಗಳಾದ ಉದಯ ಕುಮಾರ್ ಶೆಟ್ಟಿ ಮುನಿಯಲು, ಪ್ರಸಾದ್ ರಾಜ್ ಕಾಂಚನ್, ವೆರೊನೊಕಾ ಕರ್ನೇಲಿಯೊ, ನಾಗೇಶ್ ಕುಮಾರ್ ಉದ್ಯಾವರ್, ಜಯ ಕುಮಾರ್, ಡಾ. ಸುನೀತಾ ಶೆಟ್ಟಿ, ಲೂಯಿಸ್ ಲೋಬೊ ಮತ್ತಿತರರಿದ್ದರು