ಉಡುಪಿ: ಪ್ರಸಕ್ತ ಸಾಲಿನ ಅಗಸ್ಟ್ ಮಾಹೆಯಿಂದ ಮೀನುಗಾರಿಕಾ ಋತು ಪ್ರಾರಂಭವಾಗಿದ್ದು, ಜಿಲ್ಲೆಯ ಮೀನುಗಾರರು ಹಲವು ವಿಧಾನದ ಮೀನುಗಾರಿಕೆಯಲ್ಲಿ ತೊಡಗಿಕೊಂಡಿ
ದ್ದು, ಈ ಅವಧಿಯ ಪ್ರಾರಂಭದಲ್ಲಿ ಅವಘಡಗಳು ಸಂಭವಿಸುತ್ತಿರುವುದು ಹೆಚ್ಚಾಗಿ ವರದಿಯಾಗುತ್ತಿದೆ.
ಆದ್ದರಿಂದ ಮೀನುಗಾರಿಕೆಗೆ ತೆರಳುವಾಗ ಮೀನುಗಾರರು ಮುಂಜಾಗ್ರತಾ ಕ್ರಮಗಳನ್ನು ವಹಿಸುವುದರೊಂದಿಗೆ ಜೀವರಕ್ಷಕ ಸಾಧನಗಳನ್ನು ಕಡ್ಡಾಯವಾಗಿ ಧರಿಸಬೇಕು. ಸಮುದ್ರ ಪ್ರಕ್ಷುಬ್ಧವಾಗಿರುವಾಗ ಹಾಗೂ ಹವಾಮಾನ ಇಲಾಖೆ ಹವಾಮಾನ ಮುನ್ಸೂಚನೆ ಹೊರಡಿಸಿದ ದಿನಗಳಲ್ಲಿ ಮೀನುಗಾರಿಕೆಗೆ ತೆರಳಬಾರದು. ಬೋಟಿನಲ್ಲಿ ತೆರಳುವ ಕಲಾಸಿಗಳ ಸಂಖ್ಯೆ ನೋಂದಣಿ ಪ್ರಮಾಣ ಪತ್ರದಲ್ಲಿ ನಮೂದಿಸಿದಷ್ಟೇ ಇರಬೇಕು. ಮೀನುಗಾರಿಕೆಗೆ ತೆರಳುವವರು ಈಜು ಬಲ್ಲವರಾಗಿರಬೇಕು ಹಾಗೂ ಮೀನುಗಾರಿಕೆಗೆ ತೆರಳುವ ಬೋಟನ್ನು ಪ್ರವಾಸೋದ್ಯೋಮಕ್ಕಾಗಿ ಉಪಯೋಗಿಸಬಾರದು.
ಮೇಲ್ಕಂಡ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ಇಲಾಖಾ ನಿಬಂಧನೆಗಳನ್ನು ಮೀರಿ ಮೀನುಗಾರಿಕೆಯಲ್ಲಿ ತೊಡಗಿದ್ದಲ್ಲಿ ಬೋಟ್ನ ಮಾಲೀಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ