ಇಂದು ಕಾಪು ದೀಪ ಸ್ತಂಭ ದ ಬಳಿ ನಡೆದ ಸಂವಿಧಾನ ಜಾಗ್ರತಿ ಜಾಥಾ ಕಾರ್ಯಕ್ರಮಕ್ಕೆ ಮುನ್ನ ಕಾಪು ಪ್ರಾಥಮಿಕ ಶಾಲಾ ಆವರಣ ದಿಂದ ನಡೆದ ಜಾಥಾ ಕಾರ್ಯಕ್ರಮ ಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಜಾಥಾದಲ್ಲಿ ಶಾಲಾ ಮಕ್ಕಳಿಂದ ಬ್ಯಾಂಡ್ ಸೆಟ್, ಎನ್.ಸಿ.ಸಿ, ಪೆರೆಡ್ , ವಿವಿಧ ದಲಿತ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಯಿತು. ಕಾಪು ಬೀಚ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೀನುಗಾರಿಕಾ ಬೋಟ್ ನಲ್ಲಿ ಸಂವಿದಾನ ಪೀಠಿಕೆಯ ಗಾಳಿಪಟ ಹಾರಿಸುವುದು,ಸಂವಿಧಾನ ಜಾಥ ಸಿಗನೇಜರ್ ಬೋರ್ಡ,ರೂಬಿಕ್ಸ್ ಕ್ಯುಬ್ ಮೂಲಕ ಸಂವಿದಾನ ಚಿತ್ರ ರಚನೆ , ಸ್ಥಳೀಯ ಕಲಾವಿದರಿಂದ ಪೂಜಾ ಕುಣಿತ , ಸಮಾಜ ಕಲ್ಯಾಣ ಇಲಾಖೆ ನಿಲಯಾರ್ಥಿಗಳಿಂದ ಸಂವಿಧಾನ ಪೀಠಿಕೆ ಕುಣಿತ, ಯಕ್ಷಗಾನ ನೃತ್ಯ ರೂಪಕ, ಪೌರ ಕಾರ್ಮಿಕರಿಗೆ ಸಂವಿಧಾನ ಪೀಠಿಕೆ ನೀಡಿ ಸನ್ಮಾನ, ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ , ಪ್ರತಿಜ್ಞಾ ವಿಧಿ ಬೋಧನೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.
ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ,ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲುರ್, ಕಾಪು ತಹಶೀಲ್ದಾರ್ ಪ್ರತಿಭಾ . ಮುಖ್ಯಾಧಿಕಾರಿ ಸಂತೋಷ್ ದಲಿತ ಮುಖಂಡರುಗಳು ಕಾಪು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿ ಸಿಲ್ವಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರೋಷನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.