ಸಂಸದ ಅನಂತ ಕುಮಾರ್ ಹೆಗಡೆ ಸಮಯ ಕೇಳಿರುವೆ , ಅವರು ಸಮಯ ಕೊಟ್ಟ ಮೇಲೆ ಭೇಟಿಯಾಗುತ್ತೇನೆ : ವಿಶ್ವೇಶ್ವರ ಹೆಗಡೆ ಕಾಗೇರಿ

ಕಾರವಾರ: ಸಂಸದನಾದ ನಂತರವೂ ಅನಂತ ಕುಮಾರ್ ಹೆಗಡೆ ಸಲಹೆ ಪಡೆಯುವೆ. ಸಂಸದ ಅನಂತ ಕುಮಾರ್ ಹೆಗಡೆ ಸಮಯ ಕೇಳಿದ್ದೇನೆ. ಅವರು ಸಮಯ ಕೊಟ್ಟ ಮೇಲೆ ಭೇಟಿಯಾಗುತ್ತೇನೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು‌ .

ಕಾರವಾರ ಪತ್ರಿಕಾ ಭವನದಲ್ಲಿ ಅವರು ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜೋಡೆತ್ತು ಅಂದದ್ದು ನಿಜ. ಮುಂದೆ ಜೋಡಿ ಕೆಲಸ ಮಾಡ್ತಿವಿ‌ . ಸಮಯ ಜೋಡಿಸಿ ಕೊಳ್ತೇವೆ ಎಂದರು. ಹರತಾಳು ಹಾಲಪ್ಪ ಕಾರವಾರ ಜಿಲ್ಲೆಯ ಉಸ್ತುವಾರಿ ಬೇಡ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ , ಹಾಗೇನಿಲ್ಲ, ಅವರು ಶಿವಮೊಗ್ಗದಲ್ಲಿ ಹೆಚ್ಚು ಸಮಯ‌ ಕೇಳಿದ್ದಾರೆ. ಕಾರವಾರ ಜಿಲ್ಲೆಗೆ ಎರಡು ದಿನ ಸಮಯ ಕೊಡ್ತಾರೆ. ನಮ್ಮಲ್ಲಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡ್ತಾ ಇದಾರೆ ಎಂದರು.

ಯಾವುದಾದು ಕಾರಣಗಳಿಂದ ಪಕ್ಷದಲ್ಲಿ ಕೆಲವರ ಮನಸ್ಸಿಗೆ ಬೇಜಾರಾಗಿದ್ದರೆ ಅದು ಕ್ಷಣಿಕ. ಅಮೇಲೆ ಸರಿ ಹೋಗ್ತದೆ ಎಂದರು.

ಬಿಜೆಪಿಯಲ್ಲಿ ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆಗೆ ಎಂದು ಕಾಗೇರಿ ಹೇಳಿದರು.

ಟಿಕೆಟ್ ತಪ್ಪಿದ ನಂತರ ಅಸಮಾಧಾನ ನಮ್ಮ ಪಕ್ಷದಲ್ಲಿ ಇಲ್ಲ‌ . ಪರಿವಾರ ಸಂಘಟನೆಯ ಶಕ್ತಿ, ಒಂದೇ ವಿಚಾರಧಾರೆ. ದೇಶವನ್ನು ವಿದೇಶಿ ಶಕ್ತಿಗಳು ಆಳುವಂತೆ ಮಾಡಲ್ಲ ಎಂದು ಆಶ್ವಾಸನೆ ಕೊಡ್ತೇನೆ ಎಂದರು‌.

ನಮ್ಮ ಗೆಲುವಿಗೆ ಅವರು ಶಕ್ತಿ ಹಾಕಿ ಕೆಲಸ ಮಾಡ್ತಾರೆ. ವಿಚಾರ ನಮ್ಮದು, ಅವರದು ಒಂದೇ ಎಂದು ಕಾಗೇರಿ ಹೇಳಿದರು.

ಮೋದಿ ಮತ್ತೊಮ್ಮೆ ಎಂದು ಬಲವಾಗಿ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು‌ .

ಪಕ್ಷ ಅವರನ್ನು ಸ್ಟಾರ್ ಪಟ್ಟಿಯಿಂದ ಕೈಬಿಟ್ಟದ್ದೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಗೇರಿ ಅವರು ಈ ಬಗ್ಗೆ ರಾಜ್ಯಧ್ಯಕ್ಷರನ್ನು ಕೇಳುವೆ ಎಂದರು‌.

ಆನಂದ ಅಸ್ನೋಟಿಕರ್, ಮಾಜಿ ಶಾಸಕಿ ರೂಪಾಲಿ ನಾಯ್ಕರ ವಿರುದ್ಧ ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಈಗ ಬಿಜೆಪಿಗೆ ಬೆಂಬಲ ಅಂತಿದಾರೆ. ಅವರ ಜೊತೆ ವೇದಿಕೆ ಹಂಚಿಕೊಳ್ಳುವಿರಾ ಎಂಬ ಪ್ರಶ್ನೆಗೆ ಹಿಂದೆ ಆಗಿರುವುದು ಆಗಿದೆ. ಈಗ ಒಂದಾಗಿದೆವೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತುಕತೆ ಆಗಿದೆ. ಗೆಲ್ಲಲು ಇದು ಅನಿವಾರ್ಯ ಎಂದರು. ಘೋಟ್ನೇಕರ್, ಸೂರಜ್ ಸೋನಿ ಸಹ ಬರ್ತಾರೆ ಅಂದರು.

ಅನಂತ ಕುಮಾರ್ ಹೆಗಡೆ ಆರು ಬಾರಿ ಸಂಸದರಾದರೂ ಅಭಿವೃದ್ಧಿ ಅಗಿಲ್ಲ ಎಂಬ ಮಾತಿದೆ. ನಿಮ್ಮ ನಡೆ ಏನು ಎಂಬುದಕ್ಕೆ ನಾನು ಅಭಿವೃದ್ಧಿ ಪರ ಎಂದರು.

ಮಾಜಿ ಶಾಸಕಿ ರೂಪಾಲಿ ನಾಯ್ಕ, ಗಣಪತಿ ಉಳ್ವೇಕರ್, ವೆಂಕಟೇಶ ನಾಯ್ಕ್ , ಎನ್ .ಎಸ್.ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
…..

Latest Indian news

Popular Stories