ಏಷ್ಯಾದ ಮೊದಲ ಮಂಗನ ಸಿಡುಬು (Mpox) ಪಾಕಿಸ್ತಾನದ ವ್ಯಕ್ತಿಯಲ್ಲಿ ಪತ್ತೆ – ರೋಗ ಲಕ್ಷಣ ಹೀಗಿರುತ್ತದೆ!

ಹೊಸದಿಲ್ಲಿ: ಮಂಗನ ಸಿಡಬು (ಎಂಪಾಕ್ಸ್‌) ಪ್ರಕರಣವೊಂದು ಏಷ್ಯಾದಲ್ಲೇ ಮೊದಲ ಬಾರಿಗೆ ಪಾಕಿಸ್ಥಾನದಲ್ಲಿ ದೃಢಪಟ್ಟಿದೆ. ಮಂಗನ ಸಿಡುಬು ಕುರಿತು ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿ ಸಿದ ಬೆನ್ನಲ್ಲೇ ಈ ಪ್ರಕರಣ ಪತ್ತೆಯಾ ಗಿದೆ ಎಂದು ಪಾಕಿಸ್ಥಾನ ಆರೋಗ್ಯ ಸಚಿವಾಲಯವು ಹೇಳಿದೆ.
ಇತ್ತೀಚೆಗಷ್ಟೇ ಸೌದಿ ಅರೇಬಿಯಾದಿಂದ ಹಿಂದಿರುಗಿರುವ 34 ವರ್ಷದ ವ್ಯಕ್ತಿಯೊಬ್ಬನಿಗೆ ಮಂಗನ ಸಿಡುಬು ತಗಲಿದೆ. ಈತನೊಂದಿಗೆ ಸಂಪರ್ಕ ಹೊಂದಿರುವ ಎಲ್ಲರನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಪಾಕಿಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. 2023ರಲ್ಲಿ 11 ಪ್ರಕರಣಗಳು ಪತ್ತೆಯಾಗಿದ್ದವು ಮತ್ತು ಒಬ್ಬರು ಮೃತಪಟ್ಟಿದ್ದರು.

ಮಂಗನ ಸಿಡುಬು ರೋಗ ಲಕ್ಷಣಗಳು
ಮಂಗನ ಸಿಡುಬು ಪತ್ತೆಯಾದ ವರಲ್ಲಿ ತೀವ್ರ ಜ್ವರ, ತಲೆನೋವು, ಸ್ನಾಯು ನೋವು, ಬೆನ್ನು ನೋವು, ಗ್ರಂಥಿಗಳ ಉಬ್ಬುವಿಕೆ, ನಡುಕ, ಕೀಲು ನೋವು ಮತ್ತು ಆಯಾಸ ಕಂಡು ಬರುತ್ತದೆ.

Latest Indian news

Popular Stories