ಚೆನ್ನೈ: ರಸ್ತೆ ಬದಿಯಲ್ಲಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿ ಮಹಿಳೆಯ ತುಂಡರಿಸಿದ ದೇಹದ ಭಾಗಗಳು ಪತ್ತೆಯಾಗಿರುವ ಘಟನೆ ಚೆನ್ನೈ ತೊರೈಪಾಕ್ಕಂನಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ಮಾಧವರಂ ಮೂಲದ ದೀಪಾ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ತೊರೈಪಾಕ್ಕಂ ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಚೆನ್ನೈ ನ ಐಟಿ ಕಾರಿಡಾರ್ ಬಳಿ ಇಂದು (ಗುರುವಾರ) ಬೆಳಿಗ್ಗೆ ಸುಮಾರು ಏಳು ಗಂಟೆಯ ಸುಮಾರಿಗೆ ವಾಕಿಂಗ್ ಹೋಗುವವರಿಗೆ ದುರ್ನಾತ ಬಂದಿದೆ ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ವೇಳೆ ರಸ್ತೆ ಬದಿಯಲ್ಲಿ ಸೂಟ್‌ಕೇಸ್ ಒಂದು ಪತ್ತೆಯಾಗಿದೆ ಇದನ್ನು ಗಮನಿಸಿದ ಸ್ಥಳೀಯರು ಸೂಟ್‌ಕೇಸ್ ಓಪನ್ ಮಾಡಿದ್ದಾರೆ ಈ ವೇಳೆ ಅದರಲ್ಲಿ ಮಹಿಳೆಯೊಬ್ಬರ ತುಂಡರಿಸಿದ್ದ ದೇಹ ಪತ್ತೆಯಾಗಿದೆ ಗಾಬರಿಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಸೂಟ್‌ಕೇಸ್ ನಲ್ಲಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಿದ್ದಾರೆ.ಘಟನೆಗೆ ಸಂಬಂಧಿಸಿ ಸೂಟ್‌ಕೇಸ್ ಪತ್ತೆಯಾದ ಪ್ರದೇಶದ ಸುತ್ತ ಮುತ್ತಲಿನ ಸಿಸಿ ಟಿವಿ ಪರಿಶೀಲನೆ ನಡೆಸಿದ ವೇಳೆ ಅದೇ ಪ್ರದೇಶದ ನಿವಾಸಿಯಾಗಿರುವ ಮಣಿಕಂದನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತ ಮಾಧವರಂ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಕಳೆದ ಮೂರೂ ದಿನಗಳಿಂದ ನಾಪತ್ತೆಯಾಗಿರುವುದಾಗಿ ಮಹಿಳೆಯ ಸಹೋದರ ದೂರು ನೀಡಿದ್ದು ಇದೀಗ ಅದೇ ಮಹಿಳೆ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.ಪ್ರಾಥಮಿಕ ಮಾಹಿತಿ ಪ್ರಕಾರ ಹಣದ ವಿಚಾರಕ್ಕೆ ಮಣಿಕಂದನ್, ದೀಪಾ ಅವರನ್ನು ಕೊಲೆಗೈದು ಬಳಿಕ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿ ಬೆಳ್ಳಂಬೆಳಗ್ಗೆ ರಸ್ತೆಯ ಬದಿ ಎಸೆದು ಹೋಗಿದ್ದಾನೆ ಎನ್ನಲಾಗಿದೆ. ಪೊಲೀಸರು ಇನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.