ಕೇರಳ ಮೂಲದ ನಾರ್ವೇಜಿಯನ್ ಉದ್ಯಮಿ ಲೆಬನಾನ್‌ನಲ್ಲಿ ನಡೆದ ಹೆಜ್ಬೊಲ್ಲಾ ಪೇಜರ್ ಸ್ಫೋಟಕ್ಕೆ ಸಂಬಂಧ ಹೊಂದಿದ್ದಾರೆಯೇ? – ತೀವ್ರ ತನಿಖೆ

ಕೇರಳ ಮೂಲದ ನಾರ್ವೆಯ ಉದ್ಯಮಿ ರಿನ್ಸನ್ ಜೋಸ್ ಅವರು ತಮ್ಮ ಕಂಪನಿ ನಾರ್ಟಾ ಗ್ಲೋಬಲ್ ಮೂಲಕ ಲೆಬನಾನ್ ಸ್ಫೋಟಕ್ಕೆ ಸಂಬಂಧಿಸಿದ ಪೇಜರ್‌ಗಳನ್ನು ಮಾರಾಟ ಮಾಡಿದ್ದಾರೆ ಎಂದು ಹಂಗೇರಿಯ ಸುದ್ದಿ ಸೈಟ್ ಟೆಲೆಕ್ಸ್ ವರದಿ ಮಾಡಿದೆ .

ಬಲ್ಗೇರಿಯಾದ ಸೋಫಿಯಾದಲ್ಲಿ ನೆಲೆಗೊಂಡಿರುವ ನೋರ್ಟಾ ಗ್ಲೋಬಲ್ ಕೂಡ ಗುರುವಾರ ತನ್ನ ವೆಬ್‌ಸೈಟ್ ಅನ್ನು ಅಳಿಸಿದೆ, ಅದು ತಂತ್ರಜ್ಞಾನ ಸಲಹಾ ಕುರಿತು ತಮ್ಮ ಕೆಲಸವನ್ನು ಜಾಹೀರಾತು ಮಾಡಿದೆ. ನೋರ್ಟಾ ಕಛೇರಿಯು ಅದರ ನೋಂದಾಯಿತ ವಿಳಾಸದಲ್ಲಿ ಕಂಡುಬಂದಿಲ್ಲ.

ರಿನ್ಸನ್ ಜೋಸ್ ಅವರನ್ನು ಸುದ್ದಿ ಸಂಸ್ಥೆ ರಾಯಿಟರ್ಸ್ ಸಂಪರ್ಕಿಸಿದೆ ಆದರೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಬಲ್ಗೇರಿಯನ್ ರಾಷ್ಟ್ರೀಯ ಭದ್ರತಾ ಏಜೆನ್ಸಿ ಆರೋಪಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಹೆಜ್ಬೊಲ್ಲಾಗೆ ಪೇಜರ್‌ಗಳನ್ನು ತಲುಪಿಸುವಲ್ಲಿ ಸಂಸ್ಥೆಯು ಯಾವುದೇ ಪಾತ್ರ ಹೊಂದಿಲ್ಲ ಎಂದು ಶುಕ್ರವಾರ ಆರೋಪ ನಿರಾಕರಿಸಿತು.

ಉದ್ಯೋಗ ಸಲಹಾ ಸಂಸ್ಥೆ ನಡೆಸುತ್ತಿದ್ದ ರಿನ್ಸನ್, ನಾರ್ವೆಯಲ್ಲಿರುವ ಮಲಯಾಳಿ ಸಮುದಾಯದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದ. ಹಬ್ಬಗಳ ಆಚರಣೆ ಮತ್ತು ಫುಟ್ಬಾಲ್ ಕ್ಲಬ್ ಗಳನ್ನು ಕೂಡಾ ನಿರ್ವಹಿಸುತ್ತಿದ್ದ. 2022ರ ಮಾರ್ಚ್ ನಿಂದ ಈತ ಡಿಎನ್ ಮೀಡಿಯಾ ಗ್ರೂಪ್ ಜತೆ ಕಾರ್ಯನಿರ್ವಹಿಸುತ್ತಿದ್ದ. ಜತೆಗೆ ನಾರ್ತಾಲಿಂಕ್ ಎಂಬ ಐಟಿ ಸೇವೆ, ಸಲಹೆ, ಖರೀದಿ ಮತ್ತು ನೇಮಕಾತಿ ಕಂಪನಿಯನ್ನು ಕೂಡಾ ನಿರ್ವಹಿಸುತ್ತಿದ್ದ ಅಂಶ ಈತನ ಲಿಂಕ್ಡ್ಇನ್ ಪ್ರೊಫೈಲ್ ನಿಂದ ತಿಳಿದು ಬರುತ್ತದೆ. ಪುದುಚೇರಿ ವಿವಿಯಿಂದ ಎಂಬಿಎ ಪದವಿ ಪಡೆದ ಈತ ಆ ಬಳಿಕ ಅಂತರಾಷ್ಟ್ರೀಯ ಸಮಾಜ ಕಲ್ಯಾಣ ಮತ್ತು ಆರೋಗ್ಯ ನೀತಿ ವಿಷಯದಲ್ಲಿ ಓಸ್ಲೊ ಮೆಟ್ರೊಪಾಲಿಟನ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದ. ಪೂರ್ ಸರ್ವೆಂಟ್ಸ್ ಆಫ್ ಡಿವೈನ್ ಪ್ರಾವಿಡೆನ್ಸ್ ನಲ್ಲಿ ಶಿಕ್ಷಕನಾಗಿಯೂ ಸೇವೆ ಸ್ಲಿಸಿದ್ದ. ನೋರ್ತಾ ಗ್ಲೋಬಲ್ ಲಿಮಿಟೆಡ್ ಎನ್ನುವುದು ನಾರ್ತಾಲಿಂಕ್ ನ ಶೆಲ್ ಕಂಪನಿ ಎಂದು ಹೇಳಲಾಗಿದ್ದು, ಸದ್ಯಕ್ಕೆ ಈತ ಅಮೆರಿಕದಲ್ಲಿದ್ದಾನೆ ಎಂದು ತಿಳಿದು ಬಂದಿದೆ.

Latest Indian news

Popular Stories