ತಿರುಪತಿ ಲಡ್ಡುಗಳಿಗೆ ಕಳಪೆ ಕಲಬೆರಕೆ ತುಪ್ಪ ಬಳಸಿದ್ದು ನಿಜ; ತಪ್ಪೊಪ್ಪಿಕೊಂಡ ಟಿಟಿಡಿ

ತಿರುಮಲ: ಹಿಂದೂ (Hindu) ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ತಿರುಪತಿ ಲಡ್ಡು ಪ್ರಕರಣ (Tirupati Laddu Case) ಇದೀಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, (Beef Fat) ಮೀನಿನ ಎಣ್ಣೆ ಬಳಸಲಾಗುತ್ತಿದೆ ಅನ್ನೋ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಆರೋಪ ಲ್ಯಾಬ್ ವರದಿಯಲ್ಲಿ ಖಚಿತವಾಗಿದೆ.

ಇದು ಕೋಟ್ಯಾಂತರ ಹಿಂದೂ ಭಕ್ತರ ನಂಬಿಕೆಗೆ ಬಗೆದ ದ್ರೋಹವಾಗಿದೆ ಅನ್ನೋ ಆಕ್ರೋಶ ಎಲ್ಲೆಡೆ ಕೇಳಿಬರುತ್ತಿದೆ. ಈ ಪ್ರಕರಣ ತೀವ್ರಗೊಳ್ಳುತ್ತಿದ್ದಂತೆ ಇದೀಗ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ಘಟನೆ ಕುರಿತು ಕೇಂದ್ರ ಸರ್ಕಾರ ವರದಿ ಕೇಳಿದೆ. ಮತ್ತೊಂದೆಡೆ ತಿರುಪತಿ ತಿರುಮಲ ದೇವಸ್ಥಾನದ (Tirupti Tirumala Temple) ಆಡಳಿತ ಮಂಡಳಿ ಸುದ್ದಿಗೋಷ್ಠಿ ನಡೆಸಿ ತಪ್ಪೊಪ್ಪಿಕೊಂಡಿದೆ.

ಲಡ್ಡು ವಿವಾದದ ಕುರಿತು ತಿರುಪತಿ ತಿರುಮಲ ದೇವಸ್ಥಾನದ ಈವೋ ಶ್ಯಾಮಲಾ ರಾವ್ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ್ದು, “ಭಕ್ತರು ದೇವಸ್ಥಾನವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ. ಪ್ರತಿಯೊಬ್ಬ ಹಿಂದೂ ತನ್ನ ಜೀವನದಲ್ಲಿ ಒಮ್ಮೆಯಾದರೂ ಶಿವನನ್ನು ಭೇಟಿ ಮಾಡಲು ಬಯಸುತ್ತಾನೆ. ಆದರೆ ತಿರುಮಲದಲ್ಲಿ ಹಲವಾರು ವಿಮರ್ಶೆಗಳ ನಂತರ, ತುಪ್ಪದ ಗುಣಮಟ್ಟವು ಉತ್ತಮವಾಗಿಲ್ಲ ಎಂದು ಸ್ಪಷ್ಟವಾಗಿದೆ” ಎಂದು ಹೇಳಿದರು.

ಮೂರು ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ಸಿಎಂ ಸೂಚಿಸಿದರು ಲಡ್ಡು ಗುಣಮಟ್ಟ ಕುಸಿದಿದೆ. ತುಪ್ಪದ ಗುಣಮಟ್ಟ ಕಡಿಮೆಯಾಗಿದೆ. ಅದರ ಬಗ್ಗೆ ವಿಶೇಷ ಗಮನ ಹರಿಸುವಂತೆ ಸಿಎಂ ಸೂಚಿಸಿದರು. ಆನಂತರ ಆ ಬಗ್ಗೆ ಹಲವಾರು ವಿಮರ್ಶೆಗಳ ನಡೆದವು. ತುಪ್ಪದ ಗುಣಮಟ್ಟವು ಉತ್ತಮವಾಗಿಲ್ಲ ಎಂದು ಸ್ಪಷ್ಟವಾಯಿತು ಎಂದು ಹೇಳಿದರು.

“ಟಿಟಿಡಿಗೆ ಸ್ವಂತ ಲ್ಯಾಬ್ ಇಲ್ಲ… ಮಾನ್ಯತೆ ಪಡೆದ ಲ್ಯಾಬ್ ಗಳಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಹಿಂದಿನ ಸರ್ಕಾರದಲ್ಲಿ ತುಪ್ಪದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿರಲಿಲ್ಲ. ರೂ. 75 ಲಕ್ಷ ವೆಚ್ಚದಲ್ಲಿ ಲ್ಯಾಬ್ ಅನ್ನು ಏಕೆ ಸ್ಥಾಪಿಸಿಲ್ಲ . ಇದರಿಂದಾಗಿ ಗುಣಮಟ್ಟ ನಿಯಂತ್ರಣ ವ್ಯವಸ್ಥೆ ಇಲ್ಲ ಎಂಬ ನೆಪದಲ್ಲಿ ಕಲಬೆರಕೆ ತುಪ್ಪ ರವಾನಿಸಲಾಗಿದೆ ಕಡಿಮೆ ದರದ ಸಂಗ್ರಹಣೆಯಿಂದಾಗಿ ಗುಣಮಟ್ಟದ ನಿಯಂತ್ರಣದ ಕೊರತೆಯಿದೆ ಎಂದು ವಿವರಿಸಿದರು.

Latest Indian news

Popular Stories