ಹಾಂಗ್ ಕಾಂಗ್, ಸಿಂಗಾಪುರದಲ್ಲಿ ಭಾರತೀಯ MDH ಮತ್ತು EVEREST ಮಸಾಲೆ ಬ್ರಾಂಡ್‌ಗಳನ್ನು ನಿಷೇಧಿಸಿದ ನಂತರ ಭಾರತದಲ್ಲಿ ಮಾದರಿ ಪರಿಶೀಲನೆಗೆ ಕ್ರಮ!


ನವ ದೆಹಲಿ: ಹಾಂಗ್ ಕಾಂಗ್ ಮತ್ತು ಸಿಂಗಾಪುರದ ಆಹಾರ ನಿಯಂತ್ರಕ ಇಲಾಖೆ ಎರಡು ಜನಪ್ರಿಯ ಭಾರತೀಯ ಮಸಾಲೆ ಬ್ರಾಂಡ್‌ಗಳ ಕೆಲವು ಉತ್ಪನ್ನಗಳಲ್ಲಿ ಕ್ಯಾನ್ಸರ್-ಉಂಟುಮಾಡುವ ಅಂಶವನ್ನು ಪತ್ತೆ ಹಚ್ಚಿ ನಿಷೇಧಿಸಿದ ನಂತರ ದೇಶದ ಎಲ್ಲಾ MDH ಮತ್ತು ಎವರೆಸ್ಟ್ ಉತ್ಪಾದನಾ ಘಟಕಗಳಿಂದ ಮಸಾಲೆಗಳ ಮಾದರಿಗಳನ್ನು ಸಂಗ್ರಹಿಸಲು ಆಹಾರ ಆಯುಕ್ತರಿಗೆ ಸರ್ಕಾರ ಆದೇಶಿಸಿದೆ.

“ದೇಶದ ಎಲ್ಲಾ ಆಹಾರ ಆಯುಕ್ತರಿಗೆ ಎಚ್ಚರಿಕೆ ನೀಡಲಾಗಿದೆ. ಮಸಾಲೆಗಳ ಮಾದರಿಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಮೂರ್ನಾಲ್ಕು ದಿನಗಳಲ್ಲಿ, ದೇಶದ ಎಲ್ಲಾ ಮಸಾಲೆ ತಯಾರಿಕಾ ಘಟಕಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗುವುದು” ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿರುವ ಕುರಿತು NDTV ವರದಿ ಮಾಡಿದೆ.

“ಎಂಡಿಹೆಚ್ ಮತ್ತು ಎವರೆಸ್ಟ್ ಮಾತ್ರವಲ್ಲ, ಎಲ್ಲಾ ಮಸಾಲೆ ತಯಾರಿಕಾ ಕಂಪನಿಗಳಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗುವುದು. ಸುಮಾರು 20 ದಿನಗಳಲ್ಲಿ ಪ್ರಯೋಗಾಲಯದಿಂದ ವರದಿ ಬರಲಿದೆ” ಎಂದು ಅವರು ಹೇಳಿದರು.

ಹಾಂಗ್ ಕಾಂಗ್ ಮತ್ತು ಸಿಂಗಾಪುರದ ಆಹಾರ ನಿಯಂತ್ರಕರು ಈ ಎರಡು ಮಸಾಲೆ ಬ್ರಾಂಡ್‌ಗಳ ನಾಲ್ಕು ಉತ್ಪನ್ನಗಳನ್ನು “ಅನುಮತಿಸಬಹುದಾದ ಮಿತಿಯನ್ನು ಮೀರಿದ ಮಟ್ಟದಲ್ಲಿ” ಎಥಿಲೀನ್ ಆಕ್ಸೈಡ್ ಅನ್ನು ಬಳಸುವುದರ ವಿರುದ್ಧ ಜನರನ್ನು ಎಚ್ಚರಿಸಿದ್ದಾರೆ . ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ನಿಂದ ಎಥಿಲೀನ್ ಆಕ್ಸೈಡ್ ಅನ್ನು ‘ಗ್ರೂಪ್ 1 ಕಾರ್ಸಿನೋಜೆನ್’ ಎಂದು ವರ್ಗೀಕರಿಸಲಾಗಿದೆ.






Latest Indian news

Popular Stories