ಜಿಲ್ಲೆಯಲ್ಲಿ ಬೀಜದ ಕೊರತೆಗೆ ಕಾರಣರಾದ ಸಂಬAಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹ.

ಬೀದರ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಬಿತ್ತನೆ ಬೀಜ ಜಿಲ್ಲೆಯಲ್ಲಿ ಭಾರಿ ಕೊರತೆ ಆಗಿದೆ, ರೈತರ ಸಂಪರ್ಕ ಕೇಂದ್ರದ ಮುಂದೆ ೩-೩ ದಿನ ಸೋಯಾ ಬೀಜಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಜಿಲ್ಲೆಯ ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ ರವರ ಕ್ಷೇತ್ರ ಔರಾದನಲ್ಲಿ ಬೀಜ ಕೊರತೆ ಆಗಿದೆ ಅದೇ ರೀತಿ ಶಾಸಕÀ ಈಶ್ವರ ಖಂಡ್ರೆ ರವರ ಭಾಲ್ಕಿ ಕ್ಷೇತ್ರದಲ್ಲಿಯೂ ಸೋಯಾ ಬೀಜ ಕೊರತೆ ಆಗಿದೆ, ಈ ಎರಡು ಕ್ಷೇತ್ರಗಳಲ್ಲಿ ಬೀಜ ಕೊರತೆ ಆಗಲು ಬೀದರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ತಾರಮಣ ರವರ ಕಾರ್ಯವೈಖರಿನೇ ಕಾರಣ.
ಇತ್ತೀಚಿಗೆ ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೇನ್ಸ್ನಲ್ಲಿ ಬೀದರ ಜಿಲ್ಲೆಯ ಸೋಯಾ ಕೊರತೆ ಬಗ್ಗೆ ಚರ್ಚೆ ಆಗಿದೆ, ಜಿಲ್ಲೆ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣರವರು ಜಂಟಿ ಕೃಷಿ ನಿರ್ದೇಶಕಿ ತಾರಮಣ ಯವರಿಗೆ ತರಾಟೆಗೆ ತೆಗೆದುಕೊಂಡಿದ್ದು, ಗೊತ್ತಿರುವ ವಿಷಯವಾಗಿದೆ. ಬೇಕು ಅಂತಲೆ ಜಿಲ್ಲೆಯ ಇಬ್ಬರು ಪ್ರಮುಖ ನಾಯಕರ ಕ್ಷೇತ್ರದಲ್ಲಿ ಸೋಯಾ ಬೀಜ ಕೊರತೆ ಮಾಡಿದ ಜಂಟಿ ಕೃಷಿ ನಿರ್ದೇಶಕಿ ವಿರುದ್ಧ ಕ್ರಮ ಕೈಗೊಳ್ಳಬೇಕು ಜೊತೆಗೆ ಜಿಲ್ಲೆಯಲ್ಲಿ ಸೋಯಾ ಖರೀದಿಗಾಗಿ ಇಂಡೆAಟ ಕೊಡಲು ಲಂಚ ಪಡೆದ ಆರೋಪ ಜಂಟಿ ಕೃಷಿ ನಿರ್ದೇಶಕಿ ತಾರಮಣ ಯವರ ಮೇಲೆ ಕೇಳಿ ಬರುತ್ತಿದೆ, ಈ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ಮಾಡಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ಪತ್ರಿಕಾ ಪ್ರಕಟಣೆ ಮುಖಾಂತರ ಒತ್ತಾಯಿಸುತ್ತೇನೆ.
ಜೊತೆಗೆ ಬರುವ ದಿನಗಳಲ್ಲಿ ಅವರ ವಿರುದ್ಧ ಲೋಕಾಯುಕ್ತ ತನಿಖೆಗೆ ಕೈಗೊಳ್ಳಲು ಈ ಬಗ್ಗೆ ದೂರು ಕೊಡಲಾಗುವುದು ಎಂದು ಪತ್ರಿಕೆ ಪ್ರಕಟಣೆ ಮುಖಾಂತರ ತಿಳಿಸಿರುತ್ತೇವೆ.

Latest Indian news

Popular Stories