ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಜಿಟೀವೀಟಿ ರೇಟ್ ಲೀಸ್ಟನಲ್ಲಿ ರಾಜ್ಯದಲ್ಲೇ ಬೀದರ ಜಿಲ್ಲೆಗೆ ಅಗ್ರಸ್ಥಾನ

ಬೀದರ ಜೂನ್ 01 (ಕರ್ನಾಟಕ ವಾರ್ತೆ): ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಜಿಟಿವಿಟಿ ರೇಟ್ ಲೀಸ್ಟ್ನಲ್ಲಿ ಗುರುತಿಸಿದ ರಾಜ್ಯದ ವಿವಿಧ ಜಿಲ್ಲೆಗಳ 20 ತಾಲೂಕುಗಳ ಪಟ್ಟಿಯಲ್ಲಿ ಬೀದರ ಜಿಲ್ಲೆಯ ಐದೂ ತಾಲೂಕುಗಳಿಗೂ ಸ್ಥಾನ ದೊರೆತಿದೆ. ಇದರೊಂದಿಗೆ ರಾಜ್ಯದಲ್ಲೇ ಬೀದರ ಜಿಲ್ಲೆಯು ಅಗ್ರಸ್ಥಾನ ಪಡೆಯುವ ಮೂಲಕ ಮತ್ತೊಂದು ಸಾಧನೆ ತೋರಿದೆ.
ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಜಿಟೀವಿವಿಟಿ ರೇಟ್ ಲೀಸ್ಟನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ತಾಲೂಕುಗಳಾದ ಕುಂದುಗೋಳ, ಮಾಗಡಿ, ಕಲಘಟಗಿ, ರಾಯಭಾಗ, ಖಾನಾಪೂರ, ನಾಗಮಂಗಲ, ಬೈಲಹೊಂಗಲ, ತುರುವಕೆರೆ, ಸವಣೂರ, ದೇವದುರ್ಗ, ಗೋಕಾಕ್, ಸೇಡಂ, ರಾಮದುರ್ಗ, ಬೆಂಗಳೂರ ಪೂರ್ವ, ಧಾರವಾಡ ಕೂಡ ಸ್ಥಾನ ಪಡೆದುಕೊಂಡಿವೆ. ಒಟ್ಟು 20 ತಾಲೂಕುಗಳ ಪೈಕಿ ಬೀದರ, ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ, ಔರಾದ್ ಸೇರಿದಂತೆ ಐದೂ ತಾಲೂಕುಗಳು ಸ್ಥಾನ ಪಡೆದುಕೊಂಡಿವೆ. ಜಿಲ್ಲೆಯ ಸಮಗ್ರ ಎಲ್ಲ ತಾಲೂಕುಗಳಲ್ಲೂ ಕಡಿಮೆ ಕೋವಿಡ್ ಪಾಜಿಟಿವಿಟಿ ರೇಟ್ ಹೊಂದಿದ ಹೆಗ್ಗಳಿಕೆಯ ಜಿಲ್ಲೆಯಾಗಿ ಗಡಿ ಜಿಲ್ಲೆ ಬೀದರ ರಾಜ್ಯದಲ್ಲೇ ನಂಬರ್ 1 ಸ್ಥಾನ ಗಿಟ್ಟಿಸಿದೆ.
ಶೇ.5ರಿಂದ ಶೇ.10ರೊಳಗಿನ ಕೋವಿಡ್ ಪಾಜಿಟಿವಿಟಿ ರೇಟ್‌ನಲ್ಲಿ ಪಕ್ಕದ ಕಲಬುರಗಿ ಜಿಲ್ಲೆಯ ಕಲಬುರಗಿ, ಚಿಂಚೋಳಿ, ಜೇವರಗಿ ತಾಲೂಕುಗಳು ಸ್ಥಾನ ಪಡೆದಿವೆ. ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ತಾಲೂಕು, ಯಾದಗಿರಿ ತಾಲೂಕು, ಕಲಬುರಗಿ ತಾಲೂಕುಗಳು ಕೂಡ ಶೇ.5ರಿಂದ ಶೇ.10ರೊಳಗಿನ ಕೋವಿಡ್ ಪಾಜಿಟಿವಿಟಿ ರೇಟ್‌ನಲ್ಲಿ ಸ್ಥಾನ ಪಡೆದಿವೆ.
ರಾಜ್ಯದ ವಿವಿಧ ಜಿಲ್ಲೆಗಳ 30 ತಾಲೂಕುಗಳು ಶೇ.10ರಿಂದ ಶೇ.15ರೊಳಗಿನ ಕೋವಿಡ್ ಪಾಜಿಟಿವಿಟಿ ರೇಟ್ ಹೊಂದಿವೆ. 22 ತಾಲೂಕುಗಳು ಶೇ.15ರಿಂದ ಶೇ.20ರೊಳಗಿನ ಕೋವಿಡ್ ಪಾಜಿಟಿವಿಟಿ ರೇಟ್‌ನಲ್ಲಿ ಗುರುತಿಸಿಕೊಂಡಿವೆ. 28 ತಾಲೂಕುಗಳು ಶೇ.20ರಿಂದ ಶೇ.25ರೊಳಗಿನ ಕೋವಿಡ್ ಪಾಜಿಟಿವಿಟಿ ರೇಟ್‌ನಲ್ಲಿ ಸ್ಥಾನ ಪಡೆದಿವೆ. 17 ತಾಲೂಕುಗಳು ಶೇ.25ರಿಂದ ಶೇ.30ರೊಳಗಿನ ಕೋವಿಡ್ ಪಾಜಿಟಿವಿಟಿ ರೇಟ್‌ನಲ್ಲಿ ಸ್ಥಾನ ಪಡೆದಿವೆ. 38 ತಾಲೂಕುಗಳು ಶೇ.30ಕ್ಕಿಂತ ಹೆಚ್ಚಿನ ಕೋವಿಡ್ ಪಾಜಿಟಿವಿಟಿ ರೇಟನಲ್ಲಿವೆ.
ನಮ್ಮ ಪ್ರಯತ್ನ ಇಲ್ಲಿಗೆ ನಿಲ್ಲದು: ಕೋವಿಡ್ ತಡೆಯ ಈ ನಮ್ಮ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ ಜಿಲ್ಲೆಯ ಎಲ್ಲ ಸಾರ್ವಜನಿಕರ ಸಹಕಾರ, ಎಲ್ಲ ಜನಪ್ರತಿನಿಧಿಗಳ ಪ್ರೋತ್ಸಾಹ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಪಂಚಾಯತ್‌ನ ಸಹಭಾಗೀತ್ವ ಹಾಗೂ ಕೋವಿಡ್ ಕರ್ತವ್ಯದಲ್ಲಿ ಭಾಗಿಯಾದ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮದಿಂದಾಗಿ ಬೀದರ ಜಿಲ್ಲೆಯು ಇಡೀ ರಾಜ್ಯದಲ್ಲೇ ಶೇ.5ಕ್ಕಿಂತ ಕಡಿಮೆ ಪಾಜೀಟೀವೀಟಿ ರೇಟ್ ಲೀಸ್ಟ್ನಲ್ಲಿ ತೃಪ್ತಿದಾಯಕ ಸ್ಥಾನ ಪಡೆದಿದೆ. ನಮ್ಮ ಪ್ರಯತ್ನ ಇಲ್ಲಿಗೆ ನಿಲ್ಲದು. ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಶೂನ್ಯ ಸ್ಥಾನಕ್ಕೆ ಬರುವವರೆಗೂ ಹಗಲಿರುಳು ದುಡಿಯುತ್ತೇವೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಪ್ರತಿಕ್ರಿಯಿಸಿದ್ದಾರೆ.

Latest Indian news

Popular Stories