ವಿಜಯಪುರ-ಬಸವನಬಾಗೇವಾಡಿಯಲ್ಲಿ ಸಂಜೆ ಕ್ಲಿನಿಕ್ ಆರಂಭ

ವಿಜಯಪುರ: ಜಿಲ್ಲೆಯ ಎರಡು ನಮ್ಮ ಕ್ಲಿನಿಕ್ಗಳನ್ನು ಸಂಜೆ ವೇಳೆ ಆರಂಬಿಸಲಾಗುತ್ತಿದ್ದು, ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆ ಮಾಡಲಾಗಿದ್ದು, ವಿಜಯಪುರ ನಗರದ ಅಡಕಿಗಲ್ಲಿ (ಜೋರಾಪುರ ಪೇಟೆ) ಆಯುಷ ಆಸ್ಪತ್ರೆ ಆವರಣ ಮತ್ತು ಬಸವನಬಾಗೇವಾಡಿಯ ಬಸವ ನಗರದ ನಮ್ಮ ಕ್ಲಿನಿಕ್ಗಳ ವೇಳಾಪಟ್ಟಿ ಬದಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ತಿಳಿಸಿದ್ದಾರೆ.
ಪ್ರಸ್ತುತ ಬೆಳಿಗ್ಗೆ 9 ರಿಂದ ಸಂಜೆ 4-30ರವರೆಗೆ ಕಾರ್ಯನಿರ್ವಹಿಸುತ್ತಿರುವ ಈ ಕ್ಲಿನಿಕ್ಗಳು ಇನ್ನೂ ಮುಂದೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4 ರಿಂದ ರಾತ್ರಿ 8 ಗಂಟೆವರೆಗೆ ಕಾರ್ಯನಿರ್ವಹಿಸಲಿವೆ. ರಾಜ್ಯದ 415 ನಮ್ಮ ಕ್ಲಿನಿಕ್ಗಳ ಪೈಕಿ ಆಯ್ದ 52 ನಮ್ಮ ಕ್ಲಿನಿಕ್ಗಳಲ್ಲಿ ಪ್ರಾಯೋಗಿಕವಾಗಿ ವೇಳೆ ಬದಲಾವಣೆ ಮಾಡಲಾಗಿದ್ದು, ನಗರ ಪ್ರದೇಶದಲ್ಲಿ ವಾಸಿಸುವ ಬಡ, ದುರ್ಬಲ, ಕೂಲಿಕಾರ್ಮಿಕರು ಮತ್ತು ದುಡಿಯುವ ವರ್ಗದ ಜನರು ಈ ಕ್ಲಿನಿಕ್ಗಳಲ್ಲಿ ದೊರೆಯುವ ಆರೋಗ್ಯ ಸೇವೆಯನ್ನು ಬಳಕೆ ಮಾಡಿಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories