ಕೇರಳ: ಮತ್ತೆ ನಿಫಾ ವೈರಸ್ ಆತಂಕ: 2 ಮೃತ್ಯು!

ಕೇರಳ: ಬಾವಲಿಗಳಿಂದ ಹರಡುವ ನಿಫಾ ವೈರಸ್ 2018 ಮತ್ತು 2021ರಲ್ಲಿ ದೇಶದಲ್ಲಿ ಆತಂಕ ಉಂಟುಮಾಡಿದ್ದು, ಇದೀಗ ಮತ್ತೇ ಲಗ್ಗೆ ಇಡುವ ಮುನ್ಸೂಚನೆ ನೀಡಿದೆ.

ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಜ್ವರದಿಂದ ಇಬ್ಬರು ಮೃತಪಟ್ಟಿದ್ದು, ನಿಫಾ ವೈರಸ್ನಿಂದ ಸಾವಗಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಮೃತರ ಪೈಕಿ ಒಬ್ಬರ ಸಂಬಂಧಿಕರು ಐಸಿಯುನಲ್ಲಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳ ಕೈಗೊಳ್ಳುವ ಹಿನ್ನೆಲೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಉನ್ನತ ಮಟ್ಟದ ಸಭೆ ನಡೆಸಿದ್ದು, ನಾಗರಿಕರು ಎಚ್ಚರವಾಗಿರುವಂತೆ ತಿಳಿಸಿದ್ದಾರೆ.

ವೈರಸ್ ಗೆ ತುತ್ತಾದವರು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದೇ ಇದ್ದಲ್ಲಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು. ಬಾವಲಿಗಳಿಂದ ಹರಡುವ ಈ ಮಾರಣಾಂತಿಕ ವೈರಸ್ ನಿಯಂತ್ರಣಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಪತ್ತೆಯಾಗಿಲ್ಲ.

Latest Indian news

Popular Stories