ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ದಾಖಲಿಸಿದ ಗುರುಗ್ರಾಮ್‌ ಪೊಲೀಸರು

ಹೊಸದಿಲ್ಲಿ: ತನಿಖೆಗೆ ಸಂಬಂಧಿಸಿದ ಮೂರು ಖಾತೆಗಳ ಬಗ್ಗೆ ಮಾಹಿತಿ ನೀಡಲು ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ನಿರಾಕರಿಸಿದ ಕಾರಣದಿಂದ ಗುರುಗ್ರಾಮ್ ಪೊಲೀಸರು ವಾಟ್ಸಾಪ್ ನಿರ್ದೇಶಕರು (WhatsApp director) ಮತ್ತು ನೋಡಲ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಸಾರ್ವಜನಿಕ ನೌಕರನು ಹೊರಡಿಸಿದ ಆದೇಶಕ್ಕೆ ಅವಿಧೇಯತೆ ತೋರುವುದು, ಅಪರಾಧಿಯನ್ನು ಕಾನೂನಿನ ಶಿಕ್ಷೆಯಿಂದ ರಕ್ಷಿಸಲು ಮರೆಮಾಚುವುದು ಮತ್ತು ಸಾಕ್ಷ್ಯವಾಗಿ ಸಲ್ಲಿಸಬೇಕಾದ ಯಾವುದೇ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ನಾಶಪಡಿಸುವುದಕ್ಕೆ ಸಂಬಂಧಿಸಿದ ವಿಭಾಗಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೈಬರ್ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಅಡಿಯಲ್ಲಿ ಮೇ 27 ರಂದು ಎಫ್‌ಐಆರ್ ಅನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅದರ ತನಿಖೆಯ ಭಾಗವಾಗಿ, ಗುರುಗ್ರಾಮ್ ಪೊಲೀಸರು ಆರೋಪಿಗಳು ಬಳಸುತ್ತಿದ್ದ ನಾಲ್ಕು ಸಂಖ್ಯೆಗಳ ಬಗ್ಗೆ ಮಾಹಿತಿಗಾಗಿ ವಾಟ್ಸಾಪ್‌ ಸಂಸ್ಥೆಯನ್ನು ಕೇಳಿದ್ದರು. ಜುಲೈ 17 ರಂದು ಇಮೇಲ್ ಮೂಲಕ ವಾಟ್ಸಾಪ್‌ ಸಂಸ್ಥೆಗೆ ನೋಟಿಸ್ ಕಳುಹಿಸಲಾಗಿದೆ.
ನೀಡಿದ ನಂಬರ್‌ ನ ಮಾಹಿತಿ ನೀಡುವಂತೆ ಪೊಲೀಸರು ಜುಲೈ 25ರಂದು ವಾಟ್ಸಾಪ್‌ ಸಂಸ್ಥೆಗೆ ಮತ್ತೆ ಕೇಳಿಕೊಂಡಿದ್ದಾರೆ. ಆದರೆ ಅದರ ನಿರಾಕರಣೆಯು ಶಾಸನಬದ್ಧ ಕಟ್ಟುಪಾಡುಗಳನ್ನು ನಿರ್ಲಕ್ಷಿಸುವ ಒಂದು ಸ್ಪಷ್ಟವಾದ ಕ್ರಿಯೆಯಾಗಿದೆ” ಎಂದು ಪೊಲೀಸ್ ದೂರಿನಲ್ಲಿ ಹೇಳಲಾಗಿದೆ.

ಅದರಂತೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಕೃಷ್ಣ ಚೌಧರಿ ಮತ್ತು ಇತರರನ್ನು ಹೆಸರಿಸಲಾಗಿದೆ.

Latest Indian news

Popular Stories