‘ಬಿಳಿ ಸಕ್ಕರೆಯೂ ಪ್ರಾಣಿಗಳ ಮೂಳೆಗಳನ್ನು ಒಳಗೊಂಡಿರುತ್ತದೆ, ಹೆಚ್ಚಿನ ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ’ ಎಂದ ಚೇತನ್ ಭಗತ್

ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ವಿವಾದಕ್ಕೆ ಸಂಬಂಧಿಸಿದಂತೆ ಚೇತನ್ ಭಗತ್ ಪ್ರತಿಕ್ರಿಯಿಸಿದ್ದು, ಅನೇಕ ಸಿಹಿತಿಂಡಿಗಳಲ್ಲಿ ಬಳಸಲಾಗುವ ಬಿಳಿ ಸಕ್ಕರೆಯನ್ನು ಸುಟ್ಟ ಪ್ರಾಣಿಗಳ ಮೂಳೆಗಳೊಂದಿಗೆ ಸಂಸ್ಕರಿಸಲಾಗುತ್ತದೆ ಎಂದು ಒತ್ತಿ ಹೇಳಿದ್ದಾರೆ. ಹೆಚ್ಚಿನ ಸಿಹಿತಿಂಡಿಗಳು ಮಾಂಸಾಹಾರಿ ಅಂಶಗಳನ್ನು ಹೊಂದಿರಬಹುದು ಎಂದು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ತಿರುಪತಿ ಲಾಡುವಿನಲ್ಲಿ ಅದರಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಇರುವ ಕುರಿತು ವಿವಾದ ಸೃಷ್ಟಿಯಾದ ಬೆನ್ನಲ್ಲೇ ಚೇತನ್ ಭಗತ್ ಹೇಳಿಕೆ ಬಹಳಷ್ಟು ಮಹತ್ವ ಪಡೆದಿದೆ.

ಆಂಧ್ರಪ್ರದೇಶದ ಚಿತ್ತೂರಿನ ತಿರುಮಲ ತಿರುಪತಿ ದೇವಸ್ಥಾನದಲ್ಲಿ ನೀಡಲಾಗಿದ್ದ ಲಡ್ಡು ಪ್ರಸಾದ ಕಲಬೆರಕೆಯಾಗಿರುವ ಕುರಿತು ನಡೆಯುತ್ತಿರುವ ವಿಚಾರವಾಗಿ ಖ್ಯಾತ ಕಾದಂಬರಿಕಾರ ಚೇತನ್ ಭಗತ್ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, ಭಗತ್ ಇತ್ತೀಚಿನ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಹೆಚ್ಚಿನ ಸಿಹಿತಿಂಡಿಗಳು ಬಿಳಿ ಸಕ್ಕರೆಯಿಂದ ಮಾಡಿರುತ್ತಾರೆ. ಇದನ್ನು ಸುಟ್ಟ ಪ್ರಾಣಿಗಳ ಮೂಳೆಗಳಿಂದ ತಯಾರಿಸಲಾಗುತ್ತದೆ. 

“ಬಿಳಿ ಸಕ್ಕರೆಯು ಸುಟ್ಟ ಪ್ರಾಣಿಗಳ ಮೂಳೆಗಳನ್ನು ಒಳಗೊಂಡ ಪ್ರಕ್ರಿಯೆಯೊಂದಿಗೆ ಬಿಳಿಯಾಗುತ್ತದೆ. ಹೆಚ್ಚಿನ ಸಿಹಿ ಪದಾರ್ಥಗಳಲ್ಲಿ ಬಳಸಲಾಗುತ್ತದೆ” ಎಂದು ಅವರು ಹೇಳಿದರು. ಸಾಮಾನ್ಯವಾಗಿ ಬಳಸುವ ಬಿಳಿ ಸಕ್ಕರೆಯಿಂದ ಮಾಡಿದ ಹೆಚ್ಚಿನ ಸಿಹಿತಿಂಡಿಗಳು ಉತ್ಪಾದನೆಯ ಸಮಯದಲ್ಲಿ ಅಂತಹ ಮಾಂಸಾಹಾರಿ ಪದಾರ್ಥಗಳ ಉಪಸ್ಥಿತಿಯಿಂದ ಕಳಂಕಿತವಾಗಬಹುದು ಎಂದಿದ್ದಾರೆ.

ಅವರು x ನಲ್ಲಿ ಮಾಡಿದ ಪೋಸ್ಟ್ ನಲ್ಲಿ ಇತರ ವಿಚಾರಗಳನ್ನು ಕೂಡ ಉಲ್ಲೇಖಿಸಿ ಅದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.

Latest Indian news

Popular Stories