Udupi | ಪ್ರಯಾಣ ಚೀಟಿ ತಪಸಾಣಾಧಿಕಾರಿಯ ಮಾನವೀಯ ಪ್ರಜ್ಞೆಗೆ ಪ್ರಶಂಸೆ

    ಉಡುಪಿ, ಅ.3; ಎಕ್ಸ್ ಪ್ರೆಸ್ ರೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣ ಚೀಟಿ ತಪಾಸಣಾಧಿಕಾರಿ ವಾಸುದೇವ ಪೈ ಅವರು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಅಸಹಾಯಕ ಸ್ಥಿತಿಯಲ್ಲಿರುವುದನ್ನು ಗಮನಿಸಿ, ನೆರವಿಗೆ ಬಂದು ಮಾನವೀಯತೆ ಮೆರೆದಿರುವ ವಿದ್ಯಮಾನವು ಬುಧವಾರ ನಡೆದಿದೆ. ತಪಾಸಣಾಧಿಕಾರಿಯ ಮಾನವೀಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

  ಪ್ರಯಾಣಚೀಟಿ ತಪಾಸಾಣಧಿಕಾರಿ ಅವರು ರಕ್ಷಿಸಿರುವ ವ್ಯಕ್ತಿಯನ್ನು ರೈಲು ಇಂದ್ರಾಳಿ ನಿಲ್ದಾಣದಲ್ಲಿ ಇಳಿಸಿ, ರೈಲ್ವೆ ಸಂರಕ್ಷಣಾ ದಳದ ಇನ್ಸ್‌ಪೆಕ್ಟರ್ ಮುಂದೆ ಹಾಜರುಪಡಿಸಿ, ಜೀನಾ ಪಿಂಟೋ ಕಾನೂನು ಪ್ರಕ್ರಿಯೆಗಳನ್ನು ನಡೆದಾದ ಬಳಿಕ, ಮಣಿಪಾಲ ಪೋಲಿಸರಿಗೆ ಒಪ್ಪಿಸಿದರು. ತರುವಾಯ ಪೋಲಿಸರ ವಿನಂತಿಗೆ ಸ್ಪಂದಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡುವರು, ರಕ್ಷಿಸಲ್ಪಟ್ಟಿರುವ ವ್ಯಕ್ತಿಯನ್ನು ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ. ರಕ್ಷಿಸಲ್ಪಟ್ಟಿರುವ ವ್ಯಕ್ತಿಯು ವಿಚಾರಣೆಲ್ಲಿ ದೈವತ್ ವಾಘ್ಮೊರೆ (46ವ) ತಂದೆ ವಿಲಾಸ್ ವಾಘ್ಮೋರೆ ಪೊಂಡಾ, ಗೋವದ ನಿವಾಸಿ ಎಂದು ಹೇಳಿಕೊಂಡಿದ್ದರು. ಸಂಬಂಧಿಕರನ್ನು ಪತ್ತೆಗೊಳಿಸಿದ ಇಲಾಖೆಯವರು ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಸಂಬಂಧಿಕರಿಗೆ ಹಸ್ತಾಂತರಿಸಿದರು.

Latest Indian news

Popular Stories