ಮಂಗಳೂರು: ಕಿನ್ನಿಕಂಬಳದ ಮಹಿಳೆ ನಾಪತ್ತೆ – ಪ್ರಕರಣ ದಾಖಲು

ಕೈಕಂಬ: ಇಲ್ಲಿನ ಮೂಡು ಪೆರಾರ ಗ್ರಾಮದ ಕಿನ್ನಿಕಂಬಳ ಜುಮ್ಮಾ ಮಸೀದಿ ಬಳಿಯ ನಿವಾಸಿ ಉಸ್ಮಾನ್‌ ಅವರ ಪತ್ನಿ ಫಾತಿಮಾ ಜೊಹರಾ (43) ನಾಪತ್ತೆಯಾದ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 25ರಂದು ಬೆಳಗ್ಗೆ 11ಕ್ಕೆ ಆಧಾರ್‌ ಕಾರ್ಡ್‌ ಸರಿ ಮಾಡಿಸಿಕೊಂಡು ಬರುವುದಾಗಿ ಮಕ್ಕಳಲ್ಲಿ ಹೇಳಿ ಮನೆಯಿಂದ ಹೊರಗೆ ಹೋದವರು ವಾಪಸ್‌ ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ . ಅವರ ಪತ್ತೆಗಾಗಿ ಪತಿ ಉಸ್ಮಾನ್‌ ಬಜಪೆ ಪೊಲೀಸರಿಗೆ ದೂರು ನೀಡಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. 5 ಅಡಿ ಎತ್ತರ, ಗೋಧಿ ಮೈಬಣ್ಣ, ಸಪೂರ ಶರೀರ, ಕನ್ನಡ,, ತುಳು, ಹಿಂದಿ, ಬ್ಯಾರಿ ಭಾಷೆ ಮಾತನಾಡ ಬಲ್ಲವರಾಗಿದ್ದು ಬುರ್ಖಾ ಧರಿಸಿದ್ದರು.

Latest Indian news

Popular Stories