ಆದಿ ಉಡುಪಿ ಮಾರುಕಟ್ಟೆ ಶೌಚಾಲಯ ದುರ್ನಾತ; ನಿರ್ವಹಣೆಗೆ ಆಗ್ರಹ

ಆದಿ ಉಡುಪಿ ಮೀನು ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ಶೌಚಾಲಯವು ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬುವಾಸನೆಯಿಂದ ನಾರುತ್ತಿದ್ದು ಸಾರ್ವಜನಿಕರು ಮೂತ್ರಬಾಧೆ ತೀರಿಸಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಶೌಚಾಲಯ ಕೊಠಡಿ ಶುಚಿಗೊಳಿಸದೆ ಹಲವು ತಿಂಗಳುಗಳೇ ಕಳೆದಿದ್ದು. ಮದ್ಯದ ಬಾಟಲಿಗಳಿಂದ ತುಂಬಿಕೊಂಡಿದಲ್ಲದೆ, ಗೋಡೆಗಳ ಬಣ್ಣವು ಮಾಸಿದ್ದು, ಜೇಡರ ಬಲೆಗಳು ಆವರಿಸಿಕೊಂಡಿದೆ. ಮಾರಕ ರೋಗವಾಹಕ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿದೆ. ಶೌಚಾಲಯವು ಸುಸ್ಥಿತಿಯಲ್ಲಿ ಇಲ್ಲದೆ, ಮೀನು ಮಾರುಕಟ್ಟೆಗೆ ಬರುವ ಗ್ರಾಹಕರು, ಮೀನು ವ್ಯಾಪರಸ್ಥರು ಬಹಳವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಶುಚಿತ್ವ ನಿರ್ವಹಣೆ ಇಲ್ಲದೆ ಶೌಚಾಲಯ ಪಾಳುಬಿದ್ದಿದೆ. ನಗರಸಭೆ ತಕ್ಷಣ ಇಲ್ಲಿಯ ಅವ್ಯವಸ್ಥೆಯಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಸೂಕ್ತಗೊಳಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಆಗ್ರಹಪಡಿಸಿದ್ದಾರೆ.

1001246987 Civic issues, Udupi

Latest Indian news

Popular Stories