ಉಡುಪಿ: ಅಧಿಕ ಲಾಭಾಂಶದ ಆಸೆ | 88 ಲಕ್ಷ ರೂಪಾಯಿ ಆನ್ಲೈನ್ ವಂಚನೆ

ಉಡುಪಿ: ಆನ್ಲೈನ್ ವಂಚನೆ ಪ್ರಕರಣಗಳು ಮಿತಿ ಮೀರುತ್ತಿದ್ದು ಇದೀಗ ಸಂತ್ರಸ್ಥರೊಬ್ಬರು ಆನ್ಲೈನ್’ನಲ್ಲೊ 88 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಉಪ್ಪುಂದ ಮೂಲದ ಭಾಸ್ಕರ (40)  ಉಪ್ಪುಂದ ಇವರು ಶೇರು ಮಾರುಕಟ್ಟೆಯ ಬಗ್ಗೆ Youtube ಮತ್ತು ಆನ್‌ಲೈನ್‌ ನಲ್ಲಿ ಸರ್ಚ್‌ ಮಾಡುತ್ತಿರುವಾಗ ಅಪರಿಚಿತರು N3-Follow me for Wealth enhancement ಎಂಬ WhatsApp ಗ್ರೂಪ್‌ ಗೆ ಪ ಮೊಬೈಲ್‌ ನಂಬ್ರವನ್ನು ಸೇರಿಸಿದ್ದಾರೆ.

WhatsApp ಗ್ರೂಪ್‌ ನಲ್ಲಿ ಬೇರೆ ಬೇರೆ ಗ್ರೂಪ್‌ ಗೆ Add ಆಗುವಂತೆ ಲಿಂಕ್‌ ಒಂದನ್ನು ಕಳುಹಿಸಿದ್ದು ಲಿಂಕ್‌ಗಳನ್ನು ಕ್ಕಿಕ್‌ ಮಾಡಿದಲ್ಲಿ ವಿವಿಧ ಶೇರು ಮಾರುಕಟ್ಟೆಗೆ ಸಂಬಂಧಿಸಿದ ಗ್ರೂಪ್ ಗಳಿಗೆ ಸೇರ್ಪಡೆಗೊಂಡಿದ್ದಾರೆ.

B26 Investment Alliance -Core Trading ಎಂಬ WhatsApp ಗ್ರೂಪ್‌ ನಲ್ಲಿ  ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್‌ ನಿಂದ ಕಾಲ್‌ ಮಾಡಿ ಶೇರು ಮಾರುಕಟ್ಟೆಯ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಸಂತ್ರಸ್ಥರನ್ನು ನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದಾರೆ
ಇದನ್ನು ನಂಬಿ ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ದಿನಾಂಕ:01/10/2024 ರಿಂದ ದಿನಾಂಕ:22/10/2024 ರ ತನಕ ಹಂತ ಹಂತವಾಗಿ ಒಟ್ಟು 86,80,000/- ಹಣವನ್ನು ಡಿಪಾಸಿಟ್ ಮಾಡಿಸಿಕೊಂಡಿದ್ದಾರೆ.

ತದನಂತರ  ಹೂಡಿಕೆ ಮಾಡಿದ ಹಣವನ್ನಾಗಿ ಅಥವಾ ಲಾಭಾಂಶವನ್ನಾಗಲಿ ಈವರೆಗೆ ನೀಡದೇ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿರುವ ಕುರಿತು ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 43/2024 ಕಲಂ: 66 (ಸಿ) 66 (ಡಿ) ಐ.ಟಿ. ಆಕ್ಟ್. 318(4) ಬಿ.ಎನ್.ಎಸ್.ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.

Latest Indian news

Popular Stories