ಬ್ರಹ್ಮಗಿರಿ ಸರ್ಕಲಿನಿಂದ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯ ತನಕ ರಸ್ತೆಯಲ್ಲಿ ಹೊಂಡ ಗುಂಡಿ – ದುರಸ್ತಿಗೆ ಆಗ್ರಹ

ಉಡುಪಿ, ಜು.09; ಬ್ರಹ್ಮಗಿರಿ ಸರ್ಕಲಿನಿಂದ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯ ತನಕ ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದ್ದು ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡುವರು ದೂರಿದ್ದಾರೆ. ಸಂಬಂಧಪಟ್ಟವರು ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಪಡಿಸುವಂತೆ ಅವರು ಆಗ್ರಹಿಸಿದ್ದಾರೆ.

 ಮೂರು ತಿಂಗಳ ಹಿಂದೆ ಡಾಮರೀಕರಣಗೊಂಡ ರಸ್ತೆ ಇದಾಗಿದ್ದು, ಪ್ರಾರಂಭಿಕ ಮಳೆಯಲ್ಲಿಯೇ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ಜಲ್ಲಿ ಮಿಶ್ರಣವು ರಸ್ತೆಯಲ್ಲಿ ಹರಡುಕೊಂಡಿದೆ. ದ್ವಿಚಕ್ರ ವಾಹನಗಳು ಎಡವಿ ಬಿದ್ದು, ಸವಾರರು ಗಾಯಾಳುಗಳಾಗಿರುವ ಘಟನೆಗಳು ನಡೆದಿವೆ. ಅಂಬುಲೇನ್ಸ್ ವಾಹನದ ಸಂಚಾರಕ್ಕೂ ಅಪಾಯದ ಸನ್ನಿವೇಶ ಇಲ್ಲಿ ಸೃಷ್ಟಿಯಾಗಿದೆ. ಕಳಪೆ ಮಟ್ಟದ ಕಾಮಗಾರಿಗೆ ಸಾರ್ವಜನಿಕರಿಂದ ಆಕ್ರೋಶವು ವ್ಯಕ್ತವಾಗಿದೆ. ತಕ್ಷಣ ಮಾನ್ಯ ಜಿಲ್ಲಾಧಿಕಾರಿಯವರು,ಮತ್ತು ಪೌರಾಯುಕ್ತರು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ನಗರ ಸಭಾ ಸದಸ್ಯ ನಿತ್ಯಾನಂದ ಒಳಕಾಡು ವಿನಂತಿಸಿದ್ದಾರೆ.

ಸ್ಥಳೀಯರಾದ ಇಕ್ಬಾಲ್ ಮನ್ನಾ ದಿ ಹಿಂದುಸ್ತಾನ್ ಮಾತನಾಡಿ, "ಇಲ್ಲಿ ಬಹಳಷ್ಟು ಅಪಾರ್ಟ್ಮೆಂಟ್'ಗಳಿವೆ. ಸಾವಿರಾರು ಮಂದಿ ಪ್ರತಿ ನಿತ್ಯ ಸಂಚರಿಸುತ್ತಾರೆ. ಸಮೀಪದಲ್ಲೇ ಮಸೀದಿ ಇದೆ. ಕಾನ್ವೆಂಟ್ ಶಾಲೆಗೆ ಪ್ರತಿ ನಿತ್ಯ ನೂರಾರು ಈ ದಾರಿಯಿಂದ ಸಾಗುತ್ತಾರೆ. ಸರಕಾರಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಈ ಪ್ರದೇಶದಿಂದ ನಡೆದುಕೊಂಡು ಹೋಗುತ್ತಾರೆ. ಎಲ್ಲರಿಗೂ ರಸ್ತೆ ಹಾಳಾದ ಕಾರಣ ಸಮಸ್ಯೆಯಾಗಿದೆ. ಸಂಬಂಧ ಪಟ್ಟ ಇಲಾಖೆ ಶೀಘ್ರ ದುರಸ್ತಿ ಕಾರ್ಯ ಮಾಡಲಿಯೆಂದು ಆಗ್ರಹಿಸಿದ್ದಾರೆ.
1001387071 Civic issues, Udupi

Latest Indian news

Popular Stories