ಬಂಟ್ವಾಳ. ಸೆ. 28: ಬಂಟ್ವಾಳ ತಾಲೂಕಿನ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಉಕ್ಕುಡ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಣೆಗೈಯ್ಯುತ್ತಿರುವ ನೂರುಲ್ ಹುದಾ ಸೆಕೆಂಡರಿ ಮದ್ರಸ ವಿದ್ಯಾರ್ಥಿಗಳ ಕಲಾ ಸ್ಪರ್ಧೆಯು ಇತ್ತೀಚಿಗೆ (ದಿನಾಂಕ 21/09/2024 ರಂದು) ಬಹಳಷ್ಟು ಸಂಭ್ರಮದೊಂದಿಗೆ ಅತ್ಯಾಕರ್ಷಕವಾಗಿ ಜರುಗಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಉಕ್ಕುಡ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಟಿ.ಎಚ್.ಎಂ. ಅಬ್ಬಾಸ್ ಹಾಜಿ ಅಧ್ಯಕ್ಷತೆ ವಹಿಸಿದರು.
ಮದ್ರಸ ಮುಖ್ಯೋಪಾಧ್ಯಾಯರಾದ ಯಾಸೀನ್ ಸಅದಿ ಅಲ್- ಅಫ್ಳಲಿ ಸ್ವಾಗತಗೈದರು.
ಸಫ್ವಾನ್ ಸಅದಿ ಅಲ್- ಅಫ್ಳಲಿ ಉದ್ಘಾಟನೆಗೈದರು.
ವೇದಿಕೆಯಲ್ಲಿ ಹೈದರ್ ಸಖಾಫಿ ಹಾಗೂ ಗೌರವಾನ್ವಿತ ಮುದರ್ರಿಸ್ ಹಾಫಿಲ್ ಅಹ್ಮದ್ ಶರೀಫ್ ಸಖಾಫಿ ಅಲ್-ಹಿಕಮಿ ಮಳಲಿ ಉಪಸ್ಥಿತರಿದ್ದರು.
ದಿನಾಂಕ 22/09/2024 ರಂದು ನಡೆದ ಅಲ್-ಮುರಾಫಖ ಫೆಸ್ಟ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಹ್ಯಿಸ್ಸುನ್ನ ಉಕ್ಕುಡ ದರ್ಸ್ ಪೂರ್ವ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಮಳಲಿ ಸ್ವಾಗತಗೈದರು.
ಶೈಖುನಾ ವಾಲೆಮುಂಡೋವು ಉಸ್ತಾದರು ಧಾರ್ಮಿಕ ಶಿಕ್ಷಣದ ಅನಿವಾರ್ಯತೆ ಹಾಗೂ ಪಾರಂಪರಿಕ ದರ್ಸ್ನ ಮಹತ್ವವನ್ನು ವಿವರಿಸುತ್ತಾ ಭಕ್ತಿಪೂರ್ಣ ದುಆ ಮಾಡಿ ಆಶೀರ್ವಾದ ಗೈದರು.
ಮುಹ್ಯಿಸ್ಸುನ್ನ ಉಕ್ಕುಡ ದರ್ಸ್ ಮುದರ್ರಿಸ್ ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್-ಹಿಕಮಿ ಮಳಲಿ ಊರವರ ಸಹಕಾರ ಹಾಗೂ ದರ್ಸ್ ವಿದ್ಯಾರ್ಥಿಗಳ ಸಾಧನೆಗಳನ್ನು ಮೆಲುಕು ಹಾಕುತ್ತ ಗುರುವರ್ಯರಾದ ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದ್ ಹಾಗೂ ಇನ್ನಿತರ ಉಸ್ತಾದ್ಗಳಿಗೆ ಪ್ರಾರ್ಥಿಸುತ್ತಾ ಉದ್ಘಾಟಿಸಿದರು.
ಮುತಅಲ್ಲಿಂ ವಿದ್ಯಾರ್ಥಿಗಳ ಅಲ್-ಮುರಾಫಖ ಫೆಸ್ಟ್ನ ಉತ್ಸಾಹವನ್ನು ಇಮ್ಮಡಿ ಗೊಳಿಸುವಂತೆ ಪ್ರೋತ್ಸಾಹದ ಮಾತುಗಳನ್ನಾಡಿದ ಎಂ.ಎಸ್ ಮೊಹಮ್ಮದ್ ಹಾಗೂ ಜಮಾಅತ್ ಕಾರ್ಯದರ್ಶಿ ತೈಬಾ ಶರೀಫ್, ಜಮಾಅತ್ ಕೋಶಾಧಿಕಾರಿ ಅಬ್ದುಲ್ ಕುಂಞಿ, ಅಲ್-ನೂರ್ ರಶೀದ್, ಅಬೂಬಕ್ಕರ್ ಅನಿಲಕಟ್ಟೆ,ಹಮೀದ್ ಹಾಜಿ ಕೊಡಂಗಾಯಿ,ಅಶ್ರಫ್ ವಿ.ಎಚ್ ,ಮುರ್ಶಿದುಲ್ ಅನಾಂ ಸ್ವಲಾತ್ ಸಮಿತಿಯ ಅಧ್ಯಕ್ಷರಾದ ಮುನೀರ್ ದರ್ಬೆ ಡಿ.ಎಂ ರಶೀದ್ ದರ್ಬೆ ಉಬೈದ್ ವಿಟ್ಲ ಬಝಾರ್ ಹಿದಾಯ ಫ್ರೆಂಡ್ಸ್ ಅಧ್ಯಕ್ಷರಾದ ಆರಿಫ್ ಆಲಂಗಾರ್ ಜಲಾಲಿಯ್ಯಾ ಸಮಿತಿ ಅಧ್ಯಕ್ಷರಾದ ಹೈದರ್ ಆಲಂಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.