ಉಡುಪಿ ಆಗಸ್ಟ್ 28 – ಉಡುಪಿ ನಗರಸಭಾ ವ್ಯಾಪ್ತಿಯ ಬೈಲೂರು ಮಹಿಷಮರ್ಧಿನಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸುತ್ತಿದ್ದು, ಒಂದು ಹಂತದ ಕಾಮಗಾರಿಯು ಮುಗಿದಿದ್ದು, ಪ್ರಸ್ತುತ ಇನ್ನೊಂದು ಹಂತದ ಕಾಮಗಾರಿಯನ್ನು ಪ್ರಾರಂಭಿಸಲು ಯೋಜಿಸಲಾಗಿರುವುದರಿಂದ, ಸೆಪ್ಟೆಂಬರ್ 30 ರ ವರೆಗೆ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇದಿಸಲಾಗಿರುತ್ತದೆ.
ಸಾರ್ವಜನಿಕರು ಬೈಲೂರು ಜಂಕ್ಷನ್ ನಿಂದಾ ಹನುಮಾನ್ ಗ್ಯಾರೇಜ್ ರಸ್ತೆ ಮಾರ್ಗವಾಗಿ-ಕೊರಂಗ್ರಪಾಡಿ ರಸ್ತೆಯಿಂದ ಸಂಚರಿಸಲು ಬದಲಿ ಮಾರ್ಗ ಹಾಗೂ ಕಿನ್ನಿಮೂಲ್ಕಿ ಜಂಕ್ಷನ್ನಿಂದ ಬಲೈಪಾದೆಯಾಗಿ ಕೊರಂಗ್ರಪಾಡಿ ರಸ್ತೆಯಲ್ಲಿ ಸಂಚರಿಸಲು ಬದಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆಯ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.