ಮಳೆಯ ಅವಾಂತರ; ಕೆಸರಿನಲ್ಲಿ ತರಕಾರಿ ಮಾರಾಟ


ರಾಯಚೂರು: ತಾಲ್ಲೂಕಿನ ನೂರಾರು ರೈತರು ನಗರದ ಜಹಿರಾಬಾದ್ ಬಡಾವಣೆಯ ಮಾವಿನ ಕೆರೆಯ ಬಳಿ ತರಕಾರಿ ಮಾರಾಟ ಮಾಡುತ್ತಿದ್ದು, ಮಳೆಯಿಂದ ಅಸ್ತವ್ಯ್ಥವಾಗುತ್ತಿದೆ. ನಗರಸಭೆಯಿಂದ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಂಬಾಜಿರಾವ್ ಒತ್ತಾಯಿಸಿದ್ದಾರೆ.

ಸ್ಥಳಿಯ ರೈತರು ತಮ್ಮ ಜಮೀನುಗಳಲ್ಲಿ ತರಕಾರಿ ಬೆಳೆದು ನಗರಕ್ಕೆ ಮಾರಾಟ ಮಾಡಲು ಬರುತ್ತಿದ್ದಾರೆ. ರೈತರಿಂದ ಕರ ವಸೂಲಿ ಮಾಡುತ್ತಿದ್ದರೂ ಮಾರುಕಟ್ಟೆ ಪ್ರದೇಶದಲ್ಲಿ ಸ್ವಚ್ಛತೆ, ನೈರ್ಮಲ್ಯ ಹಾಗೂ ಅಗತ್ಯ ಮೂಲಸೌಕರ್ಯವಿಲ್ಲ. ಹೀಗಾಗಿ ತರಕಾರಿ ಮಾರಾಟ ಮಾಡಲು ಸಮಸ್ಯೆಯಾಗಿದೆ. ಮಳೆ ಬಂದರೆ ಕೆಸರು, ರಾಡಿಯಿಂದ ಸಮಸ್ಯೆ ಮತ್ತಷ್ಟು ಉಲ್ಬನವಾಗಿದೆ. ರಾಯಚೂರ ನಗರಸಭೆ ಅಧಿಕಾರಿಗಳಿಗಳು ಇದ್ದನ್ನು ಗಂಭೀರವಾಗಿ ಪರಿಗಣಿಸಿ ಹಳ್ಳಿಗಳಿಂದ ಬರುವ ರೈತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಆಗ್ರಹಿಸಿದರು.

ನಗರದಲ್ಲಿವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಹಾಗೂ ಅಂತಹ ಪ್ರದೇಶಗಳಲ್ಲಿ ಬಡ ರೈತರಿಗೆ ತರಕಾರಿ ಮಾರಾಟಕ್ಕ ವ್ಯವಸ್ಥೆ ಕಲ್ಪಿಸಬೇಕು. ಒತ್ತುವರಿ ಮಾಡಲಾದ ರಾಜಕಾಲುವೆ ಜಾಗ ತೆರವುಗೊಳಿಸಬೇಕು. ನಗರದ ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳು ಅಳವಡಿಸಿ ಪ್ರತಿಯೊಂದು ವಾರ್ಡ್‌ಗಳಲ್ಲಿ ಮಳೆ ನೀರು ರಸ್ತೆಯಲ್ಲಿ ನಿಲ್ಲದೆ ಸುಗಮವಾಗಿ ಹರಿಯಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Latest Indian news

Popular Stories