ಕಾರವಾರ ಗ್ರೀನ್ ಸ್ಟ್ರೀಟ್ನಲ್ಲಿ ನಗರಸಭೆ ಮಳಿಗೆ ಕಟ್ಟಿದ್ದು ಅಕ್ರಮ : ನ್ಯಾಯಾಲಯ ತೀರ್ಪು

ಕಾರವಾರ : ನಗರಸಭೆ ನಿಯಮ ಬಾಹಿರವಾಗಿ ಗ್ರೀನ್ ಸ್ಟ್ರೀಟ್ ರಸ್ತೆಯಲ್ಲಿ ಪಾದಚಾರಿಗಳ ಸಂಚರಿಸುವ ಜಾಗ ಅತಿಕ್ರಮಿಸಿ , ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಿದೆ ಎಂದು ಜಿಲ್ಲಾಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.


ನಗರದ ಗ್ರೀನ್ ಸ್ಟ್ರೀಟ್ ನಲ್ಲಿ ನಗರಸಭೆ ಕಾನೂನು ಬಾಹಿರವಾಗಿ ನೆಲ ಮಹಡಿಯಲ್ಲಿ 18 ,ಮೊದಲ ಮಹಡಿಯಲ್ಲಿ 20 ಮಳಿಗೆ ನಿರ್ಮಿಸಿ ಬಾಡಿಗೆಗೆ ನೀಡಿದೆ. ಈ ಕಟ್ಟಡ ಜನರು ಸಂಚರಿಸುವ ಪುಟ್ ಪಾತ್ ಹಾಗೂ ವಾಹನ ನಿಲುಗಡೆ ಸ್ಥಳವಾಗಿತ್ತು ಎಂದು ನಗರಸಭೆಯ ಮಾಜಿ ಸದಸ್ಯ ಜಗದೀಶ್ ಬಿರ್ಕೊಡಿಕರ್ ಮತ್ತು ವಿವೇಕಾನಂದ ನಾಯ್ಕ 2006 ರಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. 2007 ರಲ್ಲಿ ಅಕ್ರಮವಾಗಿ ರಸ್ತೆಯ ಮೇಲೆ ನಗರಸಭೆ ಕಟ್ಟಿದ ಮಳಿಗೆ ಕೆಡವಲು ಸಹ ಕೋರ್ಟ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ನಗರಸಭೆ ಪೌರಾಯುಕ್ತರು ಜಿಲ್ಲಾ ಸೆಷನ್ಸ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ರಸ್ತೆ 62 ಅಡಿ ಇದೆ, ಜನರಿಗೆ ತೊಂದರೆ ಆಗಲ್ಲ ಎಂದು ವಾದಿಸಿತ್ತು. ಆದರೆ ದೂರುದಾರರು ಗ್ರೀನ್ ಸ್ಟ್ರೀಟ್ ರಸ್ತೆ 100 ಅಡಿ ಅಗಲವಿದೆ ಎಂದು ಸಿಟಿ ಸರ್ವೆ ಮ್ಯಾಪ್ ದಾಖಲೆಯಲ್ಲಿದೆ. ರಸ್ತೆ ಅತಿಕ್ರಮಿಸಿ, ಪುಟ್ ಪಾತ್ ಇರಬೇಕಾದ ಜಾಗದಲ್ಲಿ 30 ಅಡಿ ಅಗಲ , 600 ಅಡಿ ಉದ್ದಕ್ಕೆ ಅತಿಕ್ರಮಿಸಿ 18 ಮಳಿಗೆಗಳನ್ನು ಕಟ್ಟಲಾಗಿದೆ. ‌ ಇದರಲ್ಲಿ ಮಳಿಗೆ ಹಿಂಭಾಗದಲ್ಲಿ ಮಳೆ ನೀರು ಹರಿವ ಚರಂಡಿ ಸಹ ಇದೆ. ಜನ ಸಂಚರಿಸಲು ಆಗದಂತೆ, ವಾಹನ ನಿಲುಗಡೆಗೆ ರಸ್ತೆ ಬದಿಯಲ್ಲಿ ಜಾಗ ಬಿಡದೆ, ಮಳಿಗೆ ಕಟ್ಟಿ ವ್ಯಾಪಾರಸ್ಥರಿಗೆ ನೀಡಲಾಗಿದೆ.

ಗ್ರೀನ್ ಸ್ಟ್ರೀಟ್ ರಸ್ತೆಯಲ್ಲಿ ಎಚ್ ಎಂ ಟಿ ಶೂರೂಂ, ಉಡುಪಿ ಆಯುರ್ವೇದ ಅಂಗಡಿ, ಸ್ವೀಟ್ ಮಾರ್ಟ ಹಳೆಯ ಮಳಿಗೆ ಇದ್ದ ನೆಪ ಒಡ್ಡಿ ಕೋರ್ಟಗೆ ನಗರಸಭೆ ಪ್ರತಿನಿಧಿಸುವ ವಕೀಲ ನಾಗರಾಜ್ .ವಿ.ನಾಯಕ ಮೂಲಕ ತಪ್ಪು ಮಾಹಿತಿ ನೀಡಿ, ಗ್ರೀನ್ ಸ್ಟ್ರೀಟ್ ನಲ್ಲಿ ಗ್ರೌಂಡ್ ಹಾಗೂ ಮೊದಲ ಮಹಡಿ ಸಹಿತ 38 ಮಳಿಗೆಗಳನ್ನು ಕಟ್ಟಿದ್ದನ್ನು ನಗರಸಭೆ ಸಮರ್ಥಿಸಲು ಹೊರಟಿದೆ. ಇದು ಕಾನೂನು ಬಾಹಿರ ಕೃತ್ಯ ಎಂದು ದೂರುದಾರರ ಪರ ವಕೀಲರಾದ ಬಿ.ಎಸ್.ಪೈ. , ವಕೀಲ ಎಸ್ .ವೈ.ಶೆಜವಾಡಕರ್ ವಾದಿಸಿದ್ದರು. ದೂರುದಾರರ ವಾದ ಎತ್ತಿ ಹಿಡಿದ ಪ್ರಧಾನ ಜಿಲ್ಲಾ‌ ಮತ್ತು ಸತ್ರ ನ್ಯಾಯಾಧೀಶರು ನಗರಸಭೆ ನಿರ್ಣಯದ ವಿರುದ್ಧ ತೀರ್ಪು ಪ್ರಕಟಿಸಿದ್ದಾರೆ. ಗ್ರೀನ್ ಸ್ಟ್ರೀಟ್ ನಲ್ಲಿ ನಗರ ಸಭೆ ಮಳಿಗೆ ನಿರ್ಮಿಸಲು 2004 ನವ್ಹೆಂಬರ್ ನಲ್ಲಿ ನಿರ್ಣಯ ಅಂಗೀಕರಿಸಿತ್ತು. ಅಲ್ಲದೆ ನಗರಸಭೆ ನಿರ್ಣಯಕ್ಕೂ ಮುನ್ನ 2004 ಪತ್ರಿಕೆಯೊಂದರಲ್ಲಿ ವ್ಯಾಪಾರಿ ಮಳಿಗೆ ಕಟ್ಟಡ ನಿರ್ಮಿಸಲು ಟೆಂಡರ್ ಕರೆದಿತ್ತು. ಈ ಅಂಶಗಳನ್ನು ಕೋರ್ಟ ಗಮನಿಸಿತ್ತು.



ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಗಿಲ್ಲ. ಇದು 20 ವರ್ಷಗಳ ಹಿಂದಿನ ಪ್ರಕರಣ. ಕೋರ್ಟ ಆದೇಶ ನೋಡಿ, ಪೌರಾಯುಕ್ತರ ಕಡೆ ಚರ್ಚಿಸಿ, ಮುಂದಿನ ಹೆಜ್ಜೆ ಇಡಲಾಗುವುದು.


ರವಿರಾಜ ಅಂಕೋಲೇಕರ್ (ನಗರಸಭೆಯ ಅಧ್ಯಕ್ಷ)


…….

Latest Indian news

Popular Stories