ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಮೊಗೇರರ ವಿರುದ್ಧ ಬೃಹತ್ ಪ್ರತಿಭಟನೆ : ಜಿಲ್ಲಾಧಿಕಾರಿ ಮನವಿ ಅರ್ಪಣೆ

ಪ್ರತಿಭಟನೆಯಲ್ಲಿ ಚಾಮರಾಜ ನಗರ, ಉಡುಪಿ, ಸುರತ್ಕಲನ ನೈಜ ಮೊಗೇರರು ಭಾಗಿ

ಗೌಡ ಸಾರಸ್ವತ ಸಮಾಜದ ಮಠಕ್ಕೆ ಸೇರಿದವರು ದಲಿತರಾಗಲು ಹೇಗೆ ಸಾಧ್ಯ?.

ಕಾರವಾರ: ಪರಿಶಿಷ್ಟ ಜಾತಿಯವರಲ್ಲದೆಯೂ ಜಾತಿ ಪ್ರಮಾಣ ಪತ್ರ ಪಡೆದ ಮೊಗೇರರ ವಿರುದ್ಧ ಕಾರವಾರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಮಿತ್ರ ಸಮಾಜದಿಂದ ಹೊರಟ ಮೆರವಣಿಗೆ ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶ ಗೊಂಡಿತು.

1002081461 Uttara Kannada

ಅನುಸೂಚಿತ ಜಾತಿ ಬುಡಕಟ್ಟು ಜನರ ಸಂವಿಧಾನ ಹಕ್ಕುಗಳ ರಕ್ಷಣಾ ಸಮಿತಿಯ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಭಾಷ್ ಕಾನಡೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರ ಮೊಗೇರರು ಸ್ಪೃಶ್ಯ ಜನಾಂಗಕ್ಕೆ‌ಸೇರಿದವರು, ಜನಿವಾರ ಹಾಕುತ್ತಾರೆ. ಆದರೆ ನೌಕರಿ ಹಾಗೂ ಸರ್ಕಾರಿ ಅವಕಾಶ ಪಡೆಯಲು ಎಸ್ಸಿ ಪ್ರಮಾಣ ಪತ್ರವನ್ನು ಪಡೆದು ಹಲವು ದುರುಪಯೋಗ ಆಗಿದೆ. ರಾಜಕೀಯವಾಗಿ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ದಲಿತರಿಗೆ ಅನ್ಯಾಯ ಆಗಿ ಹೋಗಿದೆ. ಶಿರಸಿ ಮೀಸಲು ಕ್ಷೇತ್ರ ಆಗಿದ್ದಾಗ ಮೀನುಗಾರ ಮೊಗೇರರು ಎಸ್ಸಿ ಪ್ರಮಾಣ ಪತ್ರ ಪಡೆದು ಇಬ್ಬರು ಶಾಸಕರಾದರು. ಭಟ್ಕಳ ಕಡೆಯವರು ಹಿಂದರ ಜಿಲ್ಲಾ ಪಂಚಾಯತ ಅಧ್ಯಕ್ಷರಾದರು. ಇದು ರಾಜಕೀಯವಾಗಿ ದಲಿತರಿಗೆ ಆದ ಅನ್ಯಾಯ ಎಂದರು. ಇಂತಹ ಅನ್ಯಾಯ ಆಗಲು ಮುಂದೆ ಅವಕಾಶ ಇಲ್ಲ ಎಂದರು.‌


ದಕ್ಷಿಣ ಕನ್ನಡದ ನೈಜ ಮೊಗೇರ ಅಶೋಕ ಕೊಂಚಾಡಿ ಮಾತನಾಡಿ ಉತ್ತರ ಕನ್ನಡದ ಮೊಗೇರರು ಜನಿವಾರ ಹಾಕುತ್ತಾರೆ. ಉತ್ತರ ಕನ್ನಡದ ಮೊಗೇರರು ಸ್ಪೃಶ್ಯ ಜನಾಂಗದವರು . ಗೌಡ ಸಾರಸ್ವತ ಸಮಾಜದ ಮಠಕ್ಕೆ ಸೇರಿದವರು ದಲಿತರಾಗಲು ಹೇಗೆ ಸಾಧ್ಯ. ಮೊಲ ಬೇಟೆಯಾಡಿ ಬದುಕುವವರಲ್ಲ. ಇಲ್ಲಿನ ಮೊಗೇರರು ನೈಜ ಮೊಗೇರಾದರೆ ದಕ್ಷಣ ಕನ್ನಡ ,ಉಡುಪಿ, ಚಾಮರಾಜ ನಗರದ ಮೊಗೇರರ ಜೊತೆ ಒಂದೇ ಒಂದು ವೈವಾಹಿಕ ಸಂಬಂಧ ಆಗಿಲ್ಲ. ಹಾಗಾಗಿ ಇಷ್ಟು ದಿನ ದಲಿತರ ಅವಕಾಶ ದೋಚಿದ್ದಾರೆ ಎಂದರು.

ಉತ್ತರ ಕನ್ನಡದ ಮೊಗೇರರು ಅಸ್ಪೃಶ್ಯತೆ ಆಚರಿಸುತ್ತಾರೆ. ದಲಿತರ ಮನೆಯಲ್ಲಿ ನೀರು ಸಹ ಕುಡಿಯುವುದಿಲ್ಲ. ಮದುವೆ ದೂರದ ಮಾತು ಎಂದ ವಿಠ್ಠಲ ಕೊಂಚಾಡಿ , ಸರ್ಕಾರ ಸೌಲಭ್ಯ ದೋಚಲು ಎಸ್ಸಿ ಪ್ರಮಾಣ ಪತ್ರ ಬೇಕು. ಆದರೆ ಯಾವ ದಲಿತ‌ ಸಂಘನೆಗಳ ಜೊತೆ ಮೊಗೇರರು ಗುರುತಿಸಿ ಕೊಂಡಿದ್ದಾರೆ. ಅಂಬೇಡ್ಕರ್ ಹೆಸರು ಎಂದಾದರೂ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು. ಮೈಸೂರು ಮಾನವ ಕುಲಶಾಸ್ತ್ರೀಯ ಅಧ್ಯಯನ ವಿಭಾಗದ ಪ್ರೊ. ಎಚ್ .ಕೆ. ಭಟ್ ಅಧ್ಯಯನ ವರದಿಯಲ್ಲಿ ಉತ್ತರ ಕನ್ನಡ ಮೊಗೇರರು ಮೀನುಗಾರರು. ಅವರು ಗೌಡ ಸಾರಸ್ವತ ಬ್ರಾಹ್ಮಣರ ಸಮುದಾಯದ ಎಲ್ಲಾ ಸಂಪ್ರದಾಯ ಅನುಸರಿಸುತ್ತಾರೆ‌ .ಹಾಗಾಗಿ ಅವರು ಎಸ್ಸಿ ಜನಾಂಗ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಕೊನೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ
ಅವರಿಗೆ ಮನವಿ ಅರ್ಪಣೆ ಮಾಡಿ ,ರಾಜಕೀಯ ಶಕ್ತಿಗಳಿಗೆ ಮಣಿಯಬೇಡಿ ಎಂದು ದಲಿತ ಮುಖಂಡ , ವಕೀಲ ತುಳಸಿದಾಸ ಪಾವುಸ್ಕರ್ ಕೇಳಿಕೊಂಡರು. ಮುಕ್ರಿ , ಹಳ್ಳೇರ ಸಮುದಾಯದ ಮುಖಂಡರು, ‌ಸಾಮಾನ್ಯ ಜನರು ಪ್ರತಿಭಟನೆ ಹಾಗೂ ಧರಣಿಯಲ್ಲಿ ಭಾಗವಹಿಸಿದ್ದರು.

Latest Indian news

Popular Stories