ಉಡುಪಿ: CEIR ಪೋರ್ಟಲ್‌ ಮುಖಾಂತರ 80 ಮೊಬೈಲ್‌ಗಳನ್ನು ಪತ್ತೆಹಚ್ಚಿ ಮಾಲಿಕರಿಗೆ ಹಸ್ತಾಂತರ

ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ KSP app ಮುಖೇನಾ ಮೊಬೈಲ್‌ ಕಾಣೆಯಾದ ದೂರುಗಳು ಸ್ವೀಕರಿಸಿದ್ದು, ನಂತರ ಸದರಿ ಮೊಬೈಲ್‌ ಗಳನ್ನು ಭಾರತ ಸರ್ಕಾರ ಜಾರಿಗೆ ತಂದಿರುವ CEIR ಪೋರ್ಟಲ್‌ ಅಪ್ಲಿಕೇಷನ್‌ ಅಡಿಯಲ್ಲಿ ಮೊಬೈಲ್‌ ಗಳನ್ನು ಬ್ಲಾಕ್‌ ಮಾಡಿದ್ದು, 2024 ನೇ ಸಾಲಿನಲ್ಲಿ CEIR ಪೋರ್ಟಲ್‌ ಮುಖಾಂತರ 80 ಮೊಬೈಲ್‌ಗಳನ್ನು ಪತ್ತೆಹಚ್ಚಿ ಸುಮಾರು 50 ಮೊಬೈಲ್‌ ಗಳನ್ನು ಈಗಾಗಲೇ ದೂರುದಾರರಿಗೆ ಹಸ್ತಾಂತರಿಸಿದ್ದು, ಸದರಿ ಮೊಬೈಲ್ ಗಳ ಅಂದಾಜು ಒಟ್ಟು 10 ಲಕ್ಷ ರೂ(ಹತ್ತು ಲಕ್ಷ )ಮೌಲ್ಯ ಆಗಿರುತ್ತದೆ.

1002083567 Udupi
1002083564 Udupi

ದಿನಾಂಕ:24-10-2024 ರಂದು 32 ಮೊಬೈಲ್‌ ಗಳನ್ನು ಕಳೆದುಕೊಂಡ ದೂರು ಅರ್ಜಿದಾರರನ್ನು ಠಾಣೆಗೆ ಕರೆಸಿ ಉಡುಪಿ ಉಪವಿಭಾಗ ಪೊಲೀಸ್‌ ಉಪಾಧೀಕ್ಷಕರಾದ ಪ್ರಭು ಡಿ.ಟಿ. ಹಾಗೂ ಉಡುಪಿ ನಗರ ಪೊಲೀಸ್‌ ಠಾಣಾ ನಿರೀಕ್ಷಕರಾದ ಶ್ರೀಧರ್‌ ವಸಂತ್‌ ಸತಾರೆ ಹಾಗೂ ಪೊಲೀಸ್‌ ಉಪನಿರೀಕ್ಷಕರುಗಳಾದ ಪುನೀತ್‌ ಕುಮಾರ್‌ ಬಿ ಈ, ಈರಣ್ಣ ಶಿರಗುಂಪಿ ಮತ್ತು ಭರತೇಶ್‌ ಕಂಕಣವಾಡಿ ರವರ ಮುಖಾಂತರ ಹಸ್ತಾಂತರ ಮಾಡಲಾಗಿರುತ್ತದೆ.

Latest Indian news

Popular Stories