ಬೀದರ: ಜನ ಸ್ಪಂದನದಲ್ಲಿ ಬಂದ ಅರ್ಜಿಗಳಿಗೆ ತಕ್ಷಣ ಪರಿಹಾರ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿಬೇಕು ಮತ್ತು ವಿನಾಕಾರಣ ವಿಳಂಭ ಮಾಡಬಾರದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಎಂದು ಅಧಿಕಾರಿಗಳಿಗೆ ಹೇಳಿದರು.
ಅವರು ಬುಧವಾರ ಬೀದರ ತಾಲ್ಲೂಕು ಪಂಚಾಯತ ಕಛೇರಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ತಕ್ಷಣ ಬಗೆಹರಿಯದ ಕೆಲವು ಸಮಸ್ಯೆಗಳಿಗೆ ಹತ್ತು ದಿನಗಳಲ್ಲಿ ಪರಿಹಾರ ನೀಡಬೇಕು ಹಾಗೇನಾದರು ಸಮಸ್ಯೆಗಳಿದ್ದರೆ ಅವರಿಗೆ ಹಿಂಬರಹ ನೀಡಿ, ಆದರೆ ಅನಾವಶ್ಯಕವಾಗಿ ಜನರು ಕಛೇರಿಗಳಿಗೆ ಅಲೆಯುವಂತೆ ಮಾಡಬಾರದು.
ಮಳೆಗಾಲ ಇರುವುದರಿಂದ ರಸ್ತೆ ಚರಂಡಿಗಳಲ್ಲಿ ನೀರು ನಿಂತು ಜನರಿಗೆ ಸಮಸ್ಯೆಗಳಾಗುತ್ತವೆ ಹಾಗಾಗಿ ಮುಂಜಾಗ್ರತೆ ವಹಿಸುವಂತೆ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು. ಜನ ಸ್ಪಂದನದಲ್ಲಿ ಬಂದ ಒಟ್ಟು 31 ಅರ್ಜಿಗಳಿಗೆ ಪ್ರಥಮ ಆದ್ಯತೆ ನೀಡಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಅವರು ಮಾತನಾಡಿ, ತಮ್ಮ ಕಛೇರಿಗೆ ಜನರು ಬಂದಾಗ ಅವರಿಗೆ ಸರಿಯಾಗಿ ಸ್ಪಂದನೆಮಾಡಿ ಅಲ್ಲಿಯೆ ಸಮಸ್ಯೆಗಳನ್ನು ಬಗೆಹರಿಸಿದರೆ ಜನರು ಇಲ್ಲಿಗೆ ಬರುವುದಿಲ್ಲ.
ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಪಿಲ್ಡ್ ಲೇವಲ್ ಎಲ್ಲಾ ಮಾಹಿತಿ ಗೊತ್ತಿರುತ್ತದೆ. ಜನರಿಗೆ ಸಕಾರಾತ್ಮಕವಾಗಿ ಸ್ಪಂದನೆ ಮಾಡುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಹೇಳಿದರು.
ಜನರು ವಿವಿಧ ಸಮಸ್ಯೆಗಳ ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಗೋರನಳ್ಳಿ ಬಿ. ಗ್ರಾಮದ ಅಲ್ಲಫ್ರಭು ನಗರದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ರಸ್ತೆಯಲ್ಲಿ ನೀರು ಬರುತ್ತಿದ್ದು ಅದನ್ನು ಸರಿಪಡಿಸುವಂತೆ ರಾಘು ಪ್ರೀಯಾ ಮನವಿ ಸಲ್ಲಿಸಿದರು.
ಆನ್ಲೈನ್ದಲ್ಲಿ ಮೋಸವಾಗಿ 6 ಲಕ್ಷ ಹಣ ಕಳೆದುಕೊಂಡಿದ್ದು ನನಗೆ ನ್ಯಾಯ ಒದಗಿಸಿಕೊಡುವಂತೆ ಈಶ್ವರ ತಂದೆ ನಾಗಪ್ಪ ಪರೀಟ್ ಮನವಿ ಸಲ್ಲಿಸಿದರು ಇದಕ್ಕೆ ಕ್ರಮ ವಹಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಅಧಿಕಾರಿ ಚಂದ್ರಕಾಂತ ಪೂಜಾರ ಹೇಳಿದರು.
ಕಮಲ ನಗರ ತಾಲ್ಲೂಕಿನ ಚಿಕ್ಲಿ ಯು ಗ್ರಾಮ ಪಂಚಾಯತಿ ಪಿಡಿಓ ವಿಜಯಕುಮಾರ ಧೂಳಪ್ಪ ಇವರ ಮೇಲೆ ಲೋಕಾಯುಕ್ತ ಪ್ರಕರಣ ಬಾಕಿ ಇದ್ದರು ಮುಂಬಡ್ತಿ ನೀಡಲಾಗಿದೆ ಇದನ್ನು ರದ್ದುಪಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಗುಲಾಂ ದಸ್ತಗೀರ ಇವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೋಳಾರ ಕೆ. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಕಲಿ ಡಿಜಿಟಲ್ ಖಾತೆ ಮಾಡಿ ಸಾರ್ವಜನಿಕರಿಗೆ ನಿವೇಶನ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ಸಲ್ಲಿಸಿದರು.ರೇಷನ್ ಕಾರ್ಡ ಸಮಸ್ಯೆ, ಪಹಣಿ ತಿದ್ದುಪಡಿ ಸೇರಿದಂತೆ ಇತರೆ ವಿವಿಧ ಸಮಸ್ಯೆಗಳ ಅರ್ಜಿಗಳನ್ನು ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ ಸಹಾಯಕ ಆಯುಕ್ತರಾದ ಲವೀಶ ಒರಡಿಯಾ, ಹೆಚ್ಚುವರಿ ಪೆÇಲೀಸ್ ವರಿμÁ್ಠಧಿಕಾರಿ ಚಂದ್ರಕಾಂತ ಪೂಜಾರಿ, ಬೀದರ ತಾಲ್ಲೂಕು ತಹಶಿಲ್ದಾರ ಡಿ.ಜಿ. ಮಹತ್, ಬೀದರ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.