ಇಸ್ರೇಲ್ ಸ್ಟ್ಯಾಟರ್ಜಿ ಬಳಸುತ್ತಿರುವ ಇರಾನ್: ಇರಾನ್’ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಏಳು ಇಸ್ರೇಲಿಗರ ಬಂಧನ

ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಇತರ ರಾಷ್ಟ್ರದ ನಾಗರಿಕರ ಮೂಲಕ ಬೇಹುಗಾರಿಕೆ ನಡೆಸಿ ಕಾರ್ಯಾಚರಣೆ ನಡೆಸುದರಲ್ಲಿ ನಿಸ್ಸೀಮರು. ಇರಾನ್ ನಲ್ಲಿ ಇಸ್ಮಾಯಿಲ್ ಹನಿಯಾರನ್ನು ಇದೇ ರೀತಿಯ ಕಾರ್ಯಾಚರಣೆಯಲ್ಲಿ ಹತ್ಯೆಗೈದಿತ್ತು. ಇದೀಗ ಇರಾನ್ ಇದೇ ಸ್ಟ್ಯಾಟರ್ಜಿ ಬಳಸಿ ಇಸ್ರೇಲ್’ನ್ನು ಹಳಿಯಲು ಪ್ರಯತ್ನಿಸುತ್ತಿದೆ.

ಇದೀಗ ಇಸ್ರೇಲ್ ನಾಗರಿಕರನ್ನು ಬಳಸಿ ಇಸ್ರೇಲ್’ನಲ್ಲಿ ಬೇಹುಗಾರಿಕೆ ಆರಂಭಿಸಿದ್ದು ಇದೀಗ ಸೇನಾ ಮಾಹಿತಿ ಹಂಚಿಕೊಂಡ ಪ್ರಕರಣದಲ್ಲಿ ಏಳು ಮಂದಿ ಇಸ್ರೇಲಿಗರನ್ನು ಬಂಧಿಸಿರುವ ಕುರಿತು ಜೆರುಸ್ಲೇಮ್ ಪೋಸ್ಟ್ ವರದಿ ಮಾಡಿದೆ.

ಶಂಕಿತರು ಇರಾನ್‌ಗಾಗಿ ಸುಮಾರು 600 ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಇದರಲ್ಲಿ ಸೂಕ್ಷ್ಮ ಮಿಲಿಟರಿ ಮತ್ತು ಮೂಲಸೌಕರ್ಯ ಸೈಟ್‌ಗಳಲ್ಲಿ ಗುಪ್ತಚರ ಮಾಹಿತಿ ಸಂಗ್ರಹಿಸುವುದು. ಇರಾನ್‌ಗೆ ಸಂಭಾವ್ಯ ಮಾನವ ಗುರಿಗಳನ್ನು ಗುರುತಿಸುವುದು ಸೇರಿದಂತೆ ಹಲವು ಕಾರ್ಯಾಚರಣೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಅವರ ಆಪಾದಿತ ಬೇಹುಗಾರಿಕೆಯಲ್ಲಿ ಭಾಗಿಯಾಗಿರುವ ಗಮನಾರ್ಹ ತಾಣಗಳಲ್ಲಿ ರಾಮತ್ ಡೇವಿಡ್ ಏರ್‌ಬೇಸ್, ನೆವಟಿಮ್ ಏರ್‌ಬೇಸ್, ಗ್ಲಿಲೋಟ್ ಮತ್ತು ಗೋಲಾನಿ ಬ್ರಿಗೇಡ್ ಬೇಸ್ ಸೇರಿವೆ. ಅಲ್ಲಿ ಕಳೆದ ವಾರ ಹೆಜ್ಬೊಲ್ಲಾಹ್ ಡ್ರೋನ್ ದಾಳಿಯಲ್ಲಿ ನಾಲ್ವರು ಸೈನಿಕರು ಕೊಲ್ಲಲ್ಪಟ್ಟಿದ್ದರು.

Latest Indian news

Popular Stories