ಜಾರ್ಖಂಡ್: 81 ಸ್ಥಾನಗಳ ಪೈಕಿ 70 ಸ್ಥಾನಗಳಲ್ಲಿ ಹೇಮಂತ್ ಸೊರೇನ್ ಜೆಎಂಎಂ, ಕಾಂಗ್ರೆಸ್ ಸ್ಪರ್ಧೆ

ಜಾರ್ಖಂಡ್: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಇಂಡಿ (INDIA) ಮೈತ್ರಿಕೂಟ ಒಟ್ಟಿಗೆ ಚುನಾವಣೆ ಎದುರಿಸಲು ಮುಂದಾಗಿವೆ.

ಈ ಬಗ್ಗೆ ಸಿಎಂ ಹೇಮಂತ್ ಸೊರೇನ್ ಅಧಿಕೃತ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಹಾಗೂ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚ 81 ಕ್ಷೇತ್ರಗಳ ಪೈಕಿ 70 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಈಗಲೇ ಸ್ಥಾನ ಹಂಚಿಕೆ ವಿಷಯವಾಗಿ ಈಗಲೇ ಏನನ್ನೂ ಹೇಳುವುದು ಸಾಧ್ಯವಿಲ್ಲ ಈಗ ನಮ್ಮ ಮೈತ್ರಿಕೂಟದ ನಾಯಕ ಇಲ್ಲಿ ಇಲ್ಲ. ಅವರು ಇಲ್ಲಿ ಬಂದ ಬಳಿಕ ನಾವು ಸ್ಥಾನ ಹಂಚಿಕೆ ಮತ್ತಿತರ ವಿಷಯಗಳ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯ ಎಂದು ಸೊರೇನ್ ಹೇಳಿದ್ದಾರೆ.

11 ಸ್ಥಾನಗಳಲ್ಲಿ ಯಾರು ಸ್ಪರ್ಧಿಸಬೇಕು ಎಂಬ ಬಗ್ಗೆ ಆರ್ ಜೆಡಿ ಎಡಪಕ್ಷಗಳೊಂದಿಗೆ ಸಭೆ ನಡೆಸುವುದಾಗಿ ಸೊರೇನ್ ಹೇಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಅಥವಾ ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ ಕಾಂಗ್ರೆಸ್ 31 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈ ಬಾರಿ ಕಾಂಗ್ರೆಸ್ 27 ರಿಂದ 28 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹೇಮಂತ್ ಸೊರೆನ್ ಜಾರ್ಖಂಡ್‌ನಲ್ಲಿ ಪ್ರಮುಖ ಮುಖ ಮತ್ತು ಮಹಾಮೈತ್ರಿಕೂಟವು ಅವರ ಹೆಸರಿನ ಮೇಲೆ ಮತಗಳನ್ನು ಪಡೆಯುತ್ತದೆ ಎಂದು ನಂಬಿರುವ ಕಾರಣ JMM ತನ್ನ ಪಾಲನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Latest Indian news

Popular Stories