ಕುಶಾಲನಗರ ಕಾವೇರಿ ನದಿಗೆ ಹಾರಿದ ಸರ್ಕಾರಿ ಸಿಬ್ಬಂದಿ

ಮಡಿಕೇರಿಯ ಉಪವಿಭಾಗಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸಿಬ್ಬಂದಿ ಅರುಣ್‌ ಎಂಬುವರೇ ನದಿಗೆ ಹಾರಿರುವ ವ್ಯಕ್ತಿಯಾಗಿದ್ದು ಅಗ್ನಿಶಾಮಕದಳದ ಸಿಬ್ಬಂದಿಗಳಿಂದ ಶೋಧ ಕಾರ್ಯ ಮುಂದುವರೆದಿದೆ.

ಕುಶಾಲನಗರದ ಸೇತುವೆಯಿಂದ ಕಾವೇರಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಮಡಿಕೇರಿಯ ಉಪ ವಿಭಾಗಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕ ಅರುಣ (52)ಎಂದು ಹೇಳಲಾಗಿದೆ.

ಇವರು ಮಂಡ್ಯ ಮೂಲದವರಾಗಿದ್ದು ಕುಶಾಲನಗರದಲ್ಲಿ ತನ್ನ ಪತ್ನಿ ಹಾಗೂ ಒರ್ವೆ ಪುತ್ರನೊಂದಿಗೆ ವಾಸವಾಗಿದ್ದು ಮತ್ತೋರ್ವ ಪುತ್ರ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ. ಕಳೆದ ಒಂದುವರೆ ತಿಂಗಳಿನಿಂದ ಕರ್ತವ್ಯಕ್ಕೆ ಹಾಜರಾಗದೆ ವೈದ್ಯಕೀಯ ರಜೆಯನ್ನು ಪಡೆದಿದ್ದರು . ನಿನ್ನೆ ಕೂಡ ಕರ್ತವ್ಯಕ ಹಾಜರಾಗಿ ಇಂದು ಬೆಳಿಗ್ಗೆ 10 ಗಂಟೆಗೆ ಕಚೇರಿ ಆಗಮಿಸಿ ಸ್ವಲ್ಪ ಹೊತ್ತು ಕೆಲಸ ನಿರ್ವಹಿಸಿ 12 ಗಂಟೆಗೆ ಕಚೇರಿಯಿಂದ ತೆರಳಿದ್ದರು , ಅರುಣ ಈ ಹಿಂದೆ ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಸೇವೆ ಸಲ್ಲಿಸಿದನಂತರ ಮಡಿಕೇರಿಯ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕಳೆದ ಐದು ವರ್ಷದಿಂದ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅನಾರೋಗ್ಯದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Latest Indian news

Popular Stories