ಮಮ್ತಾಝ್ ಅಲಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪಿಗಳ ಪೈಕಿ ರಹ್ಮತ್, ಶುಹೈಬ್ ಬಂಧನ

ಮಂಗಳೂರು: ಉದ್ಯಮಿ ಮಮ್ತಾಝ್ ಅಲಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪಿಗಳ ಪೈಕಿ A1 ಆರೋಪಿ ರಹ್ಮತ್ ಮತ್ತು A6 ಆರೋಪಿ ಶುಹೈಬ್‌ನನ್ನು ಬಂಟ್ವಾಳದ ಮೆಲ್ಕಾರ್‌ನಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಖಚಿತಪಡಿಸಿದ್ದಾರೆ.

ಉದ್ಯಮಿ, ಮಾಜಿ ಶಾಸಕ ಮೊಯ್ದೀನ್ ಬಾವಾ ಸಹೋದರ ಅಕ್ಟೋಬರ್ 6ರಂದು ಕೂಳೂರು ಸೇತುವೆ ಬಳಿ ನಾಪತ್ತೆಯಾಗಿದ್ದರು. ಬಳಿಕ ಅವರ ಮೃತದೇಹ ಫಲ್ಗುಣಿ ನದಿಯಲ್ಲಿ ಅಕ್ಟೋಬರ್ 7ರಂದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾವೂರು ಠಾಣೆಯಲ್ಲಿ 6 ಮಂದಿಯ ವಿರುದ್ಧ ಮಮ್ತಾಝ್ ಅಲಿ ಯವರಿಗೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.

Latest Indian news

Popular Stories