ಪ್ರಿಯಾಂಕಾ ಗಾಂಧಿ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

ತಿರುವನಂತಪುರ: ಕೇರಳದ ವಯನಾಡ್‌ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಕಣಕ್ಕಿಳಿದಿರುವಂತೆಯೇ ಅವರ ಎದುರಾಳಿಯಾಗಿ ಸತ್ಯನ್‌ ಮೊಕೇರಿ ಅವರನ್ನು ಕಣಕ್ಕಿಳಿಸಲು ಸಿಪಿಐ ನಿರ್ಧರಿಸಿದೆ.

ವಿಪಕ್ಷಒಕ್ಕೂಟದ ಮೈತ್ರಿ ಪಕ್ಷಗಳೇ ಪ್ರಬಲ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿರುವುದು ಅಖಾಡದ ರಂಗನ್ನು ಹೆಚ್ಚಿಸಿದೆ. ನ.13 ರಂದು ವಯನಾಡ್‌ ಉಪಚುನಾವಣೆ ನಡೆಯ ಲಿದೆ 2014ರಲ್ಲಿ ಸ್ಪರ್ಧಿಸಿದ್ದ ಮೊಕೇರಿ ಮತ್ತೆ ಅಖಾಡಕ್ಕೆ ಇಳಿದಿರುವುದು ಪ್ರಬಲ ಪೈಪೋಟಿ ಯನ್ನೂ ಸೃಷ್ಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

Latest Indian news

Popular Stories