ಬಂಟ್ವಾಳ: ನಿಯಂತ್ರಣ ತಪ್ಪಿದ ಥಾರ್; ಹಲವು ವಾಹನಗಳು ಜಖಂ

ಮಂಗಳೂರು: ನಿಯಂತ್ರಣ ತಪ್ಪಿದ ಥಾರ್ ಜೀಪೊಂದು ರಸ್ತೆ ಬದಿ ಯರ್ರಾಬಿರ್ರಿ ಸಂಚರಿಸಿ ಹಲವು ವಾಹನಗಳನ್ನು ಜಖಂ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಸಜಿಪ ಎಂಬಲ್ಲಿ ನಡೆದಿದೆ.

ಏಕಾಏಕಿ ಥಾರ್ ರಸ್ತೆ ಬಿಟ್ಟು ಫುಟ್‌ಪಾತ್‌ಗೆ ಇಳಿದಿದ್ದು, ರಸ್ತೆ ಬದಿ ನಿಲ್ಲಿಸಿದ್ದ ಎರಡು ರಿಕ್ಷಾಗಳು, ಒಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಅಲ್ಲಿಯೇ ನಡೆದುಕೊಂಡು ಬರುತ್ತಿದ್ದ ಇಬ್ಬರು ಪಾದಚಾರಿ ಬಾಲಕರು ಸ್ವಲ್ಪದರದಲ್ಲೇ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

Latest Indian news

Popular Stories