ಖಾತೆಯಲ್ಲಿ ಹಣ ಇಲ್ಲದೇ ಚೆಕ್ ಮಾನ್ಯ ಮಾಡಿದ ಬ್ಯಾಂಕ್ ಆಪ್ ಮಹಾರಾಷ್ಟ್ರಗೆ 1,40,000 ರೂ. ದಂಡ !

ಧಾರವಾಡ : ಖಾತೆಯಲ್ಲಿ ಸಾಕಷ್ಟು ಹಣ ಇರದೇ ಇದ್ದರೂ. ಚೆಕ್ ಮಾನ್ಯ ಮಾಡಿದ ಬ್ಯಾಂಕ್ ಆಪ್ ಮಹಾರಾಷ್ಟ್ರಗೆ ಗ್ರಾಹಕರ ಆಯೋಗ ರೂ.1,40,000/- ದಂಡ ವಿಧಿಸಿದೆ.

ಧಾರವಾಡದ ಕೊಟ್ಟಣದ ಓಣಿ ನಿವಾಸಿ ಸುಮನ್ ಅತ್ತಿಗೇರಿ ಎಂಬುವವರು ಎದುರುದಾರ ಬ್ಯಾಂಕ್ ಆಪ್ ಮಹಾರಾಷ್ಟ್ರದ ಗ್ರಾಹಕಳಾಗಿದ್ದು, ಆ ಬ್ಯಾಂಕಿನಲ್ಲಿ ತನ್ನ ಉಳಿತಾಯ ಖಾತೆಯನ್ನು ಹೊಂದಿ ತನ್ನ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿರುತ್ತಾಳೆ.

ಹೀಗಿರುವಾಗ ತನ್ನ ಪತಿಯ ಆರೋಗ್ಯದ ಖರ್ಚಿನ ಸಲುವಾಗಿ ಹಾಗೂ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಸಕಾಲಧನ ಸಹಕಾರಿ ಸಂಘದಿಂದ ರೂ.80,000/- ಸಾಲ ಪಡೆದಿದ್ದು, ಆ ಮೊತ್ತವನ್ನು ಸಹಕಾರಿ ಸಂಘದವರು ತನ್ನ ಖಾತೆಗೆ ದಿನಾಂಕ:22/05/2024ರಂದು ವರ್ಗಾವಣೆ ಮಾಡಿರುತ್ತಾರೆ.

ತಾನು ಆ ಹಣವನ್ನು ನಗಧೀಕರಣ ಮಾಡಿಕೊಳ್ಳಲು ದಿ:23/05/2024ರಂದು ಸದರಿ ಎದುರುದಾರ ಬ್ಯಾಂಕಿಗೆ ಹೋದಾಗ ತನ್ನ ಖಾತೆಯಲ್ಲಿ ಯಾವುದೇ ಹಣ ಜಮಾ ಇರುವುದಿಲ್ಲ ಅಂತಾ ತಿಳಿಸಿರುತ್ತಾರೆ. ತದ ನಂತರ ತನ್ನ ಬ್ಯಾಂಕ್ ಪಾಸಬುಕ್‍ನಲ್ಲಿ ಹಣ ಜಮೆ ಆದ ಕುರಿತು ಎದುರುದಾರರ ಗಮನಕ್ಕೆ ತಂದರೂ ಸಹ ಅವರು ತನಗೆ ಹಣ ನಗಧೀಕರಣ ಮಾಡಿಕೊಳ್ಳಲು ಅವಕಾಶ ನೀಡದೇ ಸತಾಯಿಸಿರುತ್ತಾರೆ. ಈ ಬಗ್ಗೆ ಶಾಖಾ ವ್ಯವಸ್ಥಾಪಕರಿಗೆ ದಿ:24/05/2024ರಂದು ತನಗೆ ಖಾತೆಯಲ್ಲಿನ ಹಣ ಪಡೆದುಕೊಳ್ಳಲು ಅನುಮತಿಸಬೇಕು ಅಂತಾ ಪತ್ರ ಬರೆದರೂ ಏನೂ ಪ್ರಯೋಜನ ಆಗಿಲ್ಲ.

ಎದುರುದಾರ ಬ್ಯಾಂಕಿನವರು ತನಗೆ ತನ್ನ ಹಣ ವಿತ್ ಡ್ರಾ ಮಾಡಿಕೊಳ್ಳಲು ನಿರಾಕರಿಸಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಅವರ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರಳು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:28/06/2024 ರಂದು ದೂರು ಸಲ್ಲಿಸಿದ್ದರು.

Latest Indian news

Popular Stories