ಇಸ್ರೇಲ್-ಲೆಬನಿನಾ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಲೆಬಾನಿನಲ್ಲಿ ಪೇಜರ್ ಮತ್ತು ವಾಕಿ ಟಾಕಿ ಸ್ಪೋಟದ ನಂತರ ಹಲವು ಮಂದಿ ಮೃತಪಟ್ಟಿದ್ದರು. ಇದರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಾಗಿ ಹಿಝ್ಬುಲ್ಲಾ ಎಚ್ಚರಿಸಿತ್ತು.
ಇದೀಗ ಲೆಬನಾನ್‌ನಿಂದ ಹೆಜ್ಬೊಲ್ಲಾಹ್ ಉಡಾವಣೆ ಮಾಡಿದ ಎರಡು ಟ್ಯಾಂಕ್ ವಿರೋಧಿ ಕ್ಷಿಪಣಿಗಳು ಗೆಲಿಲೀ ಪ್ಯಾನ್‌ಹ್ಯಾಂಡಲ್‌ನ ಗಡಿಯಲ್ಲಿರುವ ರಮಿಮ್ ರಿಡ್ಜ್ ಪ್ರದೇಶದಲ್ಲಿ ಬಿದ್ದು ಇಸ್ರೇಲಿನ ಇಬ್ಬರು ಸೈನಿಕರು ಹತರಾಗಿದ್ದಾರೆ. 9 ಮಂದಿ ಗಾಯಗೊಂಡಿದ್ದಾರೆ.
ಈತನ್ಮಧ್ಯೆ ಇಸ್ರೇಲಿನ ವಿರುದ್ದ ದಾಳಿಗೆ ಗಡಿಯಲ್ಲಿ ಸಿದ್ಧವಾಗಿದ್ದ 100 ಕ್ಕಿಂತ ಅಧಿಕ ಲಾಂಚರ್ ಗಳನ್ನು ಇಸ್ರೇಲ್ ಸ್ರ್ಟೈಕ್ ಮಾಡಿರುವ ಕುರಿತು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಉತ್ತರ ಇಸ್ರೇಲ್ ನಾಗರಿಕರಿಗೆ ಬಾಂಬ್ ಶೆಲ್ಟರ್ ಸಮೀಪ ಇರಲು ಮಾರ್ಗಸೂಚಿಯನ್ನು IDF ಹೊರಡಿಸಿದೆ.