ನವದೆಹಲಿ:ಹರಿಯಾಣದ ಫರಿದಾಬಾದ್‌ನಲ್ಲಿ 12 ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ದನ ಕಳ್ಳಸಾಗಣೆದಾರ ಎಂದು ತಪ್ಪಾಗಿ ಭಾವಿಸಿ ಗೋರಕ್ಷಕರು ಕಾರಿನಲ್ಲಿ ಹಿಂಬಾಲಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ
ಆಗಸ್ಟ್ 23 ರಂದು ನಡೆದ ದಾಳಿಗಾಗಿ ಗೋರಕ್ಷಕ ಗುಂಪಿನ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರಭ್ ಎಂದು ಗುರುತಿಸಲಾಗಿದೆ.
ಸಂತ್ರಸ್ಥ ಆರ್ಯನ್ ಮಿಶ್ರಾ ಮತ್ತು ಆತನ ಸ್ನೇಹಿತರಾದ ಶಾಂಕಿ ಮತ್ತು ಹರ್ಷಿತ್ ಅವರನ್ನು ಜಾನುವಾರು ಕಳ್ಳಸಾಗಣೆದಾರರು ಎಂದು ತಪ್ಪಾಗಿ ಭಾವಿಸಿದ ಆರೋಪಿಗಳು ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯಾಣದ ಗಧಪುರಿ ಬಳಿ ಸುಮಾರು 30 ಕಿಲೋಮೀಟರ್ ವರೆಗೆ ಅವರ ಕಾರನ್ನು ಹಿಂಬಾಲಿಸಿದ್ದಾರೆ.
ಮೂಲಗಳ ಪ್ರಕಾರ, ರೆನಾಲ್ಟ್ ಡಸ್ಟರ್ ಮತ್ತು ಟೊಯೊಟಾ ಫಾರ್ಚುನರ್ ಕಾರುಗಳಲ್ಲಿ ಕೆಲವು ಜಾನುವಾರು ಕಳ್ಳಸಾಗಣೆದಾರರು ನಗರದಿಂದ ಜಾನುವಾರುಗಳನ್ನು ಎತ್ತಿಕೊಂಡು ಹೋಗುತ್ತಿದ್ದಾರೆ ಎಂದು ಗೋರಕ್ಷಕರಿಗೆ ಮಾಹಿತಿ ಸಿಕ್ಕಿದೆ.
ಬಂಧಿತ ಆರೋಪಿಗಳು ಜಾನುವಾರು ಕಳ್ಳಸಾಗಾಣಿಕೆದಾರರನ್ನು ಹುಡುಕುತ್ತಿದ್ದಾಗ ಪಟೇಲ್ ಚೌಕ್‌ನಲ್ಲಿ ಡಸ್ಟರ್ ಕಾರನ್ನು ನೋಡಿದ್ದಾರೆ. ನಂತರ ಕಾರು ಚಾಲಕ ಹರ್ಷಿತ್ ನನ್ನು ನಿಲ್ಲಿಸುವಂತೆ ಹೇಳಿದರು. ಆರ್ಯನ್ ಮತ್ತು ಅವನ ಸ್ನೇಹಿತರು ಹೆದರಿ ನಿಲ್ಲಿಸಲಿಲ್ಲ.
ಅವರು ನಿಲ್ಲಿಸದ ಕಾರಣ, ಆರೋಪಿಗಳು ಕಾರಿಗೆ ಗುಂಡು ಹಾರಿಸಿದರು. ಗುಂಡು ಪ್ರಯಾಣಿಕರ ಸೀಟಿನಲ್ಲಿದ್ದ ಆರ್ಯನ್ ಅವರ ಕುತ್ತಿಗೆಗೆ ತಗುಲಿತು. ಅಂತಿಮವಾಗಿ ಕಾರು ನಿಲ್ಲಿಸಿದಾಗ ಮತ್ತೆ ಗುಂಡು ಹಾರಿಸಲಾಯಿತು. ಆರೋಪಿಗಳು ತಮ್ಮ ಮೇಲೆ ಗುಂಡು ಹಾರಿಸಬಹುದು ಎಂದು ಭಾವಿಸಿದ್ದರು.
ಆರೋಪಿಗಳು ಕಾರಿನಲ್ಲಿ ಇಬ್ಬರು ಮಹಿಳೆಯರನ್ನು ನೋಡಿದಾಗ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರ್ಯನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಒಂದು ದಿನದ ನಂತರ ನಿಧನರಾದರು.