ಮಂಗಳೂರು: ದಂಪತಿ ಸಂಚರಿಸುತ್ತಿದ್ದ ಸ್ಕೂಟರ್‌ಗೆ ಟ್ಯಾಂಕರ್ ಢಿಕ್ಕಿ: ಪತ್ನಿ ಮೃತ್ಯು, ಪತಿಗೆ ಗಾಯ

ಮಂಗಳೂರು: ದಂಪತಿ ಸಂಚರಿಸುತ್ತಿದ್ದ ಸ್ಕೂಟರ್‌ಗೆ ಟ್ಯಾಂಕರ್ ಢಿಕ್ಕಿ ಯಾಗಿ ಪತ್ನಿ ಮೃತಪಟ್ಟಿದ್ದು, ಪತಿ ಗಾಯಗೊಂಡಿರುವ ಘಟನೆ ನಗರದ ಕೂಳೂರಿನಲ್ಲಿ ನಡೆದಿದೆ.


ಶಕೀಲ್ ಸುವರ್ಣ ಎಂಬವರ ಪತ್ನಿ ಲಾವಣ್ಯ(27) ಮೃತಪಟ್ಟವರು.


ಕೂಳೂರು ಸೇತುವೆ ಮೇಲೆ ಈ ಘಟನೆ ನಡೆದಿದ್ದು, ಅಪಘಾತದ ವೇಳೆ ರಸ್ತೆಗೆ ಬಿದ್ದ ಲಾವಣ್ಯಾಳ ತಲೆ ಮೇಲೆ ಟ್ಯಾಂಕರ್ ಚಲಿಸಿದ ಪರಿಣಾಮ ಮೃತ್ಯು ಸಂಭವಿಸಿದೆ.

ಶಕೀಲ್ ಸುವರ್ಣ ಅವರು ಸ್ಕೂಟರಿನಲ್ಲಿ ಪತ್ನಿ ಲಾವಣ್ಯರೊಂದಿಗೆ ಪಣಂಬೂರಿನಿಂದ ಕಾವೂರು ಕಡೆಗೆ ಸಂಚರಿಸುತ್ತಿದ್ದರು. ಸಂಜೆ 4ರ ಸುಮಾರಿಗೆ ಸ್ಕೂಟರ್‌ನಲ್ಲಿ ಕೂಳೂರು ಸೇತುವೆ ಮೇಲೆ ಸಂಚರಿಸುತ್ತಿದ್ದಾಗ ಕಂಟೈನರ್ ಲಾರಿಯನ್ನು ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬಲಭಾಗದಿಂದ ಏಕಾಏಕಿ ಎಡಕ್ಕೆ ಚಲಾಯಿಸಿದ್ದಾನೆ. ಈ ವೇಳೆ ರಸ್ತೆ ಎಡಬದಿಯಲ್ಲಿ ಸಂಚರಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಯಾದ ಪರಿಣಾಮ ಶಕೀಲ್ ಸುವರ್ಣ ಮತ್ತು ಲಾವಣ್ಯರವರು ಸ್ಕೂಟರ್ ಸಹಿತ ರಸ್ತೆಗೆ ಬಿದ್ದಿದ್ದಾರೆ.

ರಸ್ತೆಗೆ ಬಿದ್ದ ರಭಸಕ್ಕೆ ಲಾರಿಯ ಎಡಭಾಗದ ಹಿಂಭಾಗದ ಚಕ್ರ ಲಾವಣ್ಯರವರ ತಲೆಯ ಮೇಲೆ ಹರಿದು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಶಕೀಲ್ ಸುವರ್ಣ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Latest Indian news

Popular Stories