ನೂರಾರು ಮಂದಿ ಅಸ್ವಸ್ಥ ಪ್ರಕರಣ: ಉಪ್ಪುಂದ ಕುಡಿಯುವ ನೀರಿನ ಬಾವಿ ದುರಸ್ತಿಗೆ ಗ್ರಾಮ ಪಂಚಾಯತ್ ನಿರ್ಲಕ್ಷ್ಯ: ಸಿಪಿಎಂ ಖಂಡನೆ

ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ 6 ನೇ ಮತ್ತು 7ನೇ ವಾರ್ಡ್ ನ ಜನರು ಕಲುಷಿತ ನೀರು ಕುಡಿದು ನೂರಾರು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ನಿರ್ಲಕ್ಷವೇ ಕಾರಣವೆಂದು ಸಿಪಿಎಂ ಬೈಂದೂರು ವಲಯ ಸಮಿತಿ ಹೇಳಿದೆ.
ಕಾಸನಾಡಿಯಲ್ಲಿರುವ ಬಾವಿಯು ಅತ್ಯಂತ ತಗ್ಗು ಪ್ರದೇಶದಲ್ಲಿ ಇದ್ದು ಊರಿನ ಎಲ್ಲಾ ಕೊಳಚೆ ನೀರು ಹರಿದು ಹೋಗಿ ಬಾವಿಯೊಳಕ್ಕೆಸೇರುತ್ತಿರುವುತ್ತಿರುವುದನ್ನು ಸ್ಥಳೀಯರು ಹಲವು ಬಾರಿ ದುರಸ್ಥಿಗೆ ಒತ್ತಾಯಿಸಿದರೂ ನಿರ್ಲಕ್ಷ್ಯ ವಹಿಸಿರುವ ಗ್ರಾಮ ಪಂಚಾಯತ್ ಕ್ರಮ ಖಂಡನೀಯ ಎಂದು ತಿಳಿಸಿದೆ.ನಿರ್ಲಕ್ಷ್ಯ ವಹಿಸಿ ಜನರ ಮೂಲಭೂತ ಸೌಕರ್ಯ ಶುದ್ಧ ಕುಡಿಯುವ ನೀರು ಒದಗಿಸಲು ವಿಫಲರಾದ ಪಂಚಾಯತ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಪಿಎಂ ತಿಳಿಸಿದೆ.
ಅಸ್ವಸ್ಥರಾದ ಎಲ್ಲರಿಗೂ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಗೆ ನೀಡಲು ಜಿಲ್ಲಾಡಳಿತ ನಿಗಾ ಇಡಬೇಕೆಂದು ಎಂದು ಸಿಪಿಎಂ ಆಗ್ರಹಿಸಿದೆ.

Latest Indian news

Popular Stories