ಕೈದಿಗಳಲ್ಲಿ ಜಾತಿ ಆಧಾರದ ಮೇಲೆ ಮ್ಯಾನ್ಯುಯಲ್ ಕೆಲಸ ಹಂಚಿಕೆ ತಾರತಮ್ಯ, ಅಸಾಂವಿಧಾನಿಕ: ಸುಪ್ರೀಂಕೋರ್ಟ್

ನವದೆಹಲಿ: ದೇಶಾದ್ಯಂತ ಕಾರಾಗೃಹಗಳಲ್ಲಿ ಯಾವುದೇ ಜಾತಿ ತಾರತಮ್ಯ ನಡೆಯಬಾರದು ಎಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿದೆ. ಅಂತಹ ತಾರತಮ್ಯ ಮುಂದುವರಿಸುವ ಜೈಲು ಕೈಪಿಡಿಯಲ್ಲಿರುವ ಎಲ್ಲಾ ಪ್ರಸ್ತುತ ನಿಬಂಧನೆಗಳನ್ನು ತೆಗೆದುಹಾಕಬೇಕು ಎಂದು ಉನ್ನತ ನ್ಯಾಯಾಲಯ ಹೇಳಿದೆ.

ಕೇಂದ್ರ ಸರ್ಕಾರದ 2016 ರ ಜೈಲು ಕೈಪಿಡಿಯು ಲೋಪದಿಂದ ಕೂಡಿದೆ. 2016 ರ ಕೈಪಿಡಿಯು ಜಾತಿ ಆಧಾರದ ಮೇಲೆ ಕೈದಿಗಳ ವರ್ಗೀಕರಣವನ್ನು ನಿಷೇಧಿಸಬೇಕು. ಜಾತಿ ಶ್ರೇಣಿಯ ಆಧಾರದ ಮೇಲೆ ಕೈದಿಗಳಿಗೆ ಮ್ಯಾನ್ಯುಯಲ್ ಕೆಲಸ ನೀಡುವುದು ತಾರತಮ್ಯ ಮತ್ತು ಅಸಾಂವಿಧಾನಿಕವಾಗಿದೆ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಆದೇಶದಲ್ಲಿ ಹೇಳಿದೆ.

ಕೆಲವು ರಾಜ್ಯಗಳಲ್ಲಿನ ಕಾರಾಗೃಹ ಕೈಪಿಡಿಗಳು ಜಾತಿ ಆಧಾರದ ತಾರತಮ್ಯವನ್ನು ಪ್ರೋತ್ಸಾಹಿಸುತ್ತಿವೆ ಎಂದು ಆರೋಪಿಸಿ ಮಹಾರಾಷ್ಟ್ರದ ಕಲ್ಯಾಣದ ನಿವಾಸಿ ಸುಕಾನ್ಯ ಶಾಂತ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಒಳಚರಂಡಿ ಸ್ವಚ್ಛದಂತಹ ಅಪಾಯಕಾರಿ ಕೆಲಸಗಳನ್ನು ಕೈದಿಗಳಿಗೆ ಅನುಮತಿಸಲಾಗುವುದಿಲ್ಲ, ಹೆಚ್ಚಿನ ಕಾನೂನುಗಳನ್ನು ಬ್ರಿಟಿಷ್ ಆಳ್ವಿಕೆಯಲ್ಲಿ ರಚಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.

“ಖಾಸಗಿ ವ್ಯಕ್ತಿಗಳಿಂದ ಸಂವಿಧಾನದ ಕಲಂ 23 (ಜೀತ ಕಾರ್ಮಿಕ ನಿಷೇಧ) ಉಲ್ಲಂಘನೆಯಾಗಿದ್ದರೆ ರಾಜ್ಯವನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಕೈದಿಗಳನ್ನ ಅಮಾನವೀಯ ಕೆಲಸ ಮಾಡಲು ಮತ್ತು ದ್ವೇಷ, ತಿರಸ್ಕಾರದಿಂದ ಅಮಾನವೀಯವಾಗಿ ನಡೆಸಿಕೊಳ್ಳಲಾಗುವುದಿಲ್ಲ. ಇಂತಹ ಜಾತಿಗಳ ವಿರುದ್ಧದ ತಾರತಮ್ಯ ಮಾಡಬಾರದು ಎಂದು ಉನ್ನತ ನ್ಯಾಯಾಲಯ ತಿಳಿಸಿತು.

ತೆರೆದ ನ್ಯಾಯಾಲಯದಲ್ಲಿ ಆದೇಶ ಪ್ರಕಟಿಸಿದ ಮುಖ್ಯ ನ್ಯಾಯಾಧೀಶರು, ಜೈಲುಗಳೊಳಗಿನ ತಾರತಮ್ಯದ ಬಗ್ಗೆ ನ್ಯಾಯಾಲಯ ಸ್ವಯಂಪ್ರೇರಿತವಾಗಿ ತಿಳಿದುಕೊಳ್ಳಲಿದ್ದು, ಮೂರು ತಿಂಗಳ ನಂತರ ಸಮಸ್ಯೆಯನ್ನು ಪಟ್ಟಿ ಮಾಡಲು ರಿಜಿಸ್ಟ್ರರ್ ಗೆನಿರ್ದೇಶನ ನೀಡಿದರು. ಅಲ್ಲದೇ ರಾಜ್ಯಗಳು ಆದೇಶ ಪಾಲನೆ ಮಾಡಬೇಕಾದ ಅಗತ್ಯವಿದೆ ಎಂದರು.

ಅಂಚಿನಲ್ಲಿರುವ ಸಮುದಾಯಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳಿದ ಸುಪ್ರೀಂಕೋರ್ಟ್, ರಕ್ಷಣಾತ್ಮಕ ತಾರತಮ್ಯಕ್ಕಾಗಿ ಸಂವಿಧಾನವು ಎಸ್‌ಸಿ, ಎಸ್ ಟಿ ಸಮುದಾಯವನ್ನು ಗುರುತಿಸುತ್ತದೆ. ಆದಾಗ್ಯೂ, ಈ ಗುಂಪುಗಳ ವಿರುದ್ಧ ತಾರತಮ್ಯ ಮಾಡಲು ಜಾತಿಯನ್ನು ಬಳಸಬಾರದು ಅಥವಾ ತುಳಿತಕ್ಕೊಳಗಾದವರ ವಿರುದ್ಧ ತಾರತಮ್ಯವನ್ನು ಮುಂದುವರಿಸಬಾರದು. ಕೈದಿಗಳಲ್ಲಿ ಅಂತಹ ತಾರತಮ್ಯ ಇರಬಾರದು ಮತ್ತು ಪ್ರತ್ಯೇಕತೆಯು ಪುನರ್ವಸತಿಗೆ ಕಾರಣವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿತು.

Latest Indian news

Popular Stories