ಮಂಗಳೂರು: ಬೆಳ್ಳಂಬೆಳಗ್ಗೆ ಜೈಲಿಗೆ ಪೊಲೀಸರ ದಾಳಿ; ಮೊಬೈಲ್, ಪೆನ್‌ಡ್ರೈವ್ ಗಾಂಜಾ ಸಹಿತ ಹಲವು ವಸ್ತುಗಳ ವಶ

ಮಂಗಳೂರು: ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಮಂಗಳೂರು ಜೈಲಿಗೆ ದಿಢೀರ್ ದಾಳಿ ನಡೆಸಿರುವ ನಗರ ಪೊಲೀಸರು 25 ಮೊಬೈಲ್ ಫೋನ್‌ಗಳು, 1 ಬ್ಲ್ಯೂಟೂಥ್, 1 ಪೆನ್‌ಡ್ರೈವ್, ಐದು ಚಾರ್ಜರ್ಗಳು, 1 ಕತ್ತರಿ, 3 ಕೇಬಲ್ ಹಾಗೂ ಹಲವು ಪ್ಯಾಕೆಟ್ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಇಬ್ಬರು ಡಿಸಿಪಿ, ಮೂವರು ಎಸಿಪಿಗಳು 15 ಇನ್ಸ್ಪೆಕ್ಟರ್ ಗಳ ಸಹಿತ 150 ಸಿಬ್ಬಂದಿಗಳನ್ನೊಳಗೊಂಡ ಬೃಹತ್ ತಂಡವ ಬೆಳಗ್ಗಿನ ಜಾವ 4 ಗಂಟೆಗೆ ಈ ಕಾರ್ಯಾಚರಣೆಯನ್ನು ನಡೆಸಿದೆ.
ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಇ ದಾಳಿಯನ್ನು ನಡೆಸಲಾಗಿದ್ದು, ಈ ವಶಪಡಿಸಿಕೊಂಡ ವಸ್ತುಗಳು ಜೈಲಿನೊಳಗೆ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.

Latest Indian news

Popular Stories