ಬೆಂಗಳೂರು: ದ್ವಿಚಕ್ರವಾಹನದಲ್ಲಿ ಮಕ್ಕಳನ್ನು ಕರೆದೊಯ್ಯುವ ವೇಳೆ ಕೈಗೊಳ್ಳಬೇಕಿರುವ ಸುರಕ್ಷತಾ ಉಪಕರಣ ಬಗ್ಗೆ ಹಲವರಿಗೆ ಅರಿವು ಇಲ್ಲ. ಈ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ.
ಜನತೆ 9 ರಿಂದ 4 ವರ್ಷಗಳ ವರೆಗಿನ ಮಕ್ಕಳನ್ನು ದ್ವಿಚಕ್ರವಾಹನಗಳಲ್ಲಿ ಕರೆದೊಯ್ಯುವಾಗ ಸುರಕ್ಷತಾ ಉಪಕರಣ ಬಳಕೆ ಮಾಡಿರದೇ ಇದ್ದಲ್ಲಿ ರಾಜ್ಯ ಸಾರಿಗೆ ಸಂಸ್ಥೆ 1,000 ರೂಪಾಯಿ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
ನಾಲ್ಕು ವರ್ಷದೊಳಗಿನ ಇಬ್ಬರು ಮಕ್ಕಳ ತಂದೆಯಾಗಿರುವ ಖಾಸಗಿ ಕಂಪನಿ ಉದ್ಯೋಗಿ ವೆಂಕಟೇಶ್ ಎಂ, ಈ ಬಗ್ಗೆ ಮಾತನಾಡಿದ್ದು “ಇಂತಹ ನಿಯಮವಿದೆ ಎಂದು ನಮಗೆ ತಿಳಿದಿಲ್ಲ. ಮೊದಲನೆಯದಾಗಿ, ಸಾರಿಗೆ ಇಲಾಖೆಯು ಸುರಕ್ಷತಾ ಕ್ರಮಗಳ ಮಹತ್ವದ ಬಗ್ಗೆ ಮತ್ತು ಕಡ್ಡಾಯ ನಿಯಮದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಬೇಕು. ಜಾಗೃತಿ ಮೂಡಿಸದೆ ವಾಹನ ಸವಾರರಿಗೆ ಸಾಕಷ್ಟು ಸಮಯಾವಕಾಶ ನೀಡದೆ, ನಿಯಮ ಜಾರಿಗೊಳಿಸಿ ಭಾರಿ ದಂಡ ವಿಧಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸುರಕ್ಷತಾ ಉಪಕರಣಗಳನ್ನು ಭಾರತೀಯ ಮಾನದಂಡಗಳ ಬ್ಯೂರೋ ಪ್ರಮಾಣೀಕರಿಸಬೇಕು ಮತ್ತು ಮಗುವಿನ ಗಾತ್ರ ಮತ್ತು ತೂಕಕ್ಕೆ (30 ಕೆಜಿ ವರೆಗೆ) ಬದಲಾಯಿಸಬಹುದಾದ ಹೊಂದಾಣಿಕೆ ಪಟ್ಟಿಗಳನ್ನು ಹೊಂದಿರಬೇಕು ಎಂದು ನಿಯಮ ಉಲ್ಲೇಖಿಸಿದೆ.
ಸಾರಿಗೆ ಇಲಾಖೆಯು ಶೀಘ್ರದಲ್ಲೇ ನಿಯಮವನ್ನು ಜಾರಿಗೊಳಿಸಲು ಪ್ರಾರಂಭಿಸಲಿದೆ ಎಂದು ಸಾರಿಗೆ ಹೆಚ್ಚುವರಿ ಆಯುಕ್ತ (ಜಾರಿ) ಮಲ್ಲಿಕಾರ್ಜುನ್ ಸಿ ಟಿಎನ್‌ಐಇಗೆ ತಿಳಿಸಿದ್ದಾರೆ. “ನಾವು ಜಾಗೃತಿ ಮೂಡಿಸುತ್ತಿದ್ದೇವೆ. ಮಕ್ಕಳೊಂದಿಗೆ ಸವಾರಿ ಮಾಡುವವರು ದ್ವಿಚಕ್ರ ವಾಹನದಿಂದ ಮಕ್ಕಳು ಬೀಳುವುದನ್ನು ತಡೆಯಲು ಸರಂಜಾಮು ಬಳಸಬೇಕು, ”ಎಂದು ಅವರು ಹೇಳಿದರು.
‘ಸುರಕ್ಷತಾ ಸರಂಜಾಮುಗಳನ್ನು ಸರಬರಾಜು ಮಾಡಲು ತಯಾರಕರಿಗೆ ತಿಳಿಸಲಾಗಿದೆ’
ಸುರಕ್ಷತಾ ಸರಂಜಾಮು ಪೂರೈಸಲು ವಾಹನ ತಯಾರಕರಿಗೆ ಸಾರಿಗೆ ಇಲಾಖೆ ಮನವಿ ಮಾಡಿದೆ ಮತ್ತು ಅವರು ನೀಡದಿದ್ದರೆ ದಂಡ ವಿಧಿಸಬಹುದು ಎಂದು ಹೆಚ್ಚುವರಿ ಸಾರಿಗೆ ಆಯುಕ್ತ (ಜಾರಿ) ಮಲ್ಲಿಕಾರ್ಜುನ್ ಸಿ ತಿಳಿಸಿದ್ದಾರೆ.