ಶಿರೂರು ಗುಡ್ಡ ಕುಸಿತ ಪ್ರಕರಣ: ಎಚ್.ಆರ್.ಎಸ್ ತಂಡದಿಂದ ಸಂತ್ರಸ್ಥರಿಗೆ ಅಗತ್ಯ ವಸ್ತುಗಳ ಪೂರೈಕೆ

ಉ.ಕ: ಶಿರೂರು ಸಮೀಪದ ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದ ಹಲವು ಕುಟುಂಬಗಳು ಸಂತ್ರಸ್ಥರಾಗಿದ್ದರು. ಏಳು ಮನೆಗಳು ಸಂಪೂರ್ಣ ನಾಶವಾದರೆ 21 ಮನೆಗಳು ಭಾಗಶಃ ಹನಿಗೊಳಗಾಗಿದ್ದವು.

ಇದೀಗ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (,HRS) ಕಾರ್ಯಕರ್ತರು ಮೊದಲ ಹಂತದಲ್ಲಿ ಸರ್ವೆ ಕಾರ್ಯ ನೆರವೇರಿಸಿದ್ದರು. ಇದೀಗ ಉಡುಪಿ, ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡದ ಕಾರ್ಯಕರ್ತರು ಸ್ಥಳಕ್ಕೆ ಭೇಟಿ‌ ನೀಡಿ ರೇಷನ್ ವ್ಯವಸ್ಥೆ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಸಂತ್ರಸ್ಥರ ಪುನರ್ವಸತಿ ಕಾರ್ಯದಲ್ಲೂ ಕೈಜೋಡಿಸುವ ಕುರಿತು ತಿಳಿಸಿದ್ದಾರೆ. ಈ ಘಟನೆಯಲ್ಲಿ ಮಾಹಿತಿಯಂತೆ 10-11 ಮಂದಿ ಮೃತಪಟ್ಟಿದ್ದು ಎಂಟು ಮಂದಿಯ ಮೃತದೇಹ ಪತ್ತೆಯಾಗಿದೆ. ಚಹಾ ಅಂಗಡಿ ನಡೆಸುತ್ತಿದ್ದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದರು. ಇದೀಗ ಕೇರಳ ಮೂಲದ ಲಾರಿ ಚಾಲಕ ಕೂಡ ಮಣ್ಣಲ್ಲಿ ಹೂತು ಹೋಗಿದ್ದು ರಕ್ಷಣಾ ಕಾರ್ಯ ಸತತವಾಗಿ ನಡೆಯುತ್ತಿದೆ.

Latest Indian news

Popular Stories