ಉದ್ಘಾಟನೆಗೂ ಮುನ್ನವೇ ಪ್ರಯಾಣಿಕರಿಗೆ ಟೋಲ್ ಹೊರೆ; ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ನಾಳೆಯಿಂದ ಟೋಲ್ ಸಂಗ್ರಹ

ಬೆಂಗಳೂರು: ಬಹು ಉದ್ದೇಶಿತ ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯ ಮೊದಲ ಹಂತದ ಟೋಲ್‌ ಕೇಂದ್ರಗಳು ಸೋಮವಾರದಿಂದ ಕಾರ್ಯಾರಂಭ ಮಾಡಲಿದ್ದು, ನಾಳೆಯಿಂದಲೇ ಪ್ರಯಾಣಿಕರಿಗೆ ಭಾರಿ ಮೊತ್ತದ ಹೊರೆ ಬೀಳಲಿದೆ.

ಹೌದು.. 117 ಕಿ.ಮೀ ಉದ್ದದ ಹೆದ್ದಾರಿಯ ಬೆಂಗಳೂರು–ನಿಡಘಟ್ಟವರೆಗಿನ 56 ಕಿ.ಮೀ. ಉದ್ದದ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯದಿಂದಲೇ ಟೋಲ್ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಮಾರ್ಚ್ 11ರಂದು ಪ್ರಧಾನಿ ನರೇಂದ್ರ ಮೋದಿ ಹತ್ತುಪಥಗಳ ಹೆದ್ದಾರಿಯನ್ನು ಉದ್ಘಾಟಿಸಲಿದ್ದು, ಅದಕ್ಕೂ ಮುನ್ನವೇ ಪ್ರಯಾಣಿಕರು ಟೋಲ್ ಕಟ್ಟಬೇಕಿದೆ. 

ಎರಡು ಪಥಗಳ ಸರ್ವೀಸ್ ರಸ್ತೆಗಿಲ್ಲ ಟೋಲ್
ಆರು ಪಥಗಳ ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚರಿಸುವವರಿಗೆ ಈ ಟೋಲ್‌ ಅನ್ವಯ ಆಗಲಿದೆ. ತಲಾ ಎರಡು ಪಥಗಳ ಸರ್ವೀಸ್ ರಸ್ತೆಯಲ್ಲಿನ ಸಂಚಾರಕ್ಕೆ ಯಾವುದೇ ಟೋಲ್‌ ಇಲ್ಲ.  ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ನಿಯಮಿತವಾಗಿ ಪ್ರಯಾಣಿಸುವವರಿಗೆ ತಿಂಗಳ ಪಾಸ್ ಸೌಲಭ್ಯವೂ ಇದೆ.

ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿ ಟೋಲ್‌ ನಿರ್ಮಿಸಲಾಗಿದ್ದು, ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವವರು ಇಲ್ಲಿ ಟೋಲ್‌ ಶುಲ್ಕ ಕಟ್ಟಿ ಪ್ರಯಾಣಿಸಬೇಕು. ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಬಳಿ ಇರುವ ಟೋಲ್‌ನಲ್ಲಿ ಮೈಸೂರು ಕಡೆಯಿಂದ ಪ್ರಯಾಣಿಸುವವರು ಟೋಲ್‌ ಕಟ್ಟಿ ಬೆಂಗಳೂರಿನತ್ತ ಬರಬಹುದು. ಈ ಕೇಂದ್ರಗಳು ತಲಾ 11 ಗೇಟುಗಳನ್ನು ಒಳಗೊಂಡಿದ್ದು, ಫ್ಯಾಶ್‌ ಟ್ಯಾಗ್‌ ಸಹಿತ ವಿವಿಧ ಸೌಲಭ್ಯಗಳನ್ನು ಒಳಗೊಳ್ಳಲಿವೆ.

ಯಾವ ವಾಹನಕ್ಕೆ ಎಷ್ಟು ಟೋಲ್ ಇಲ್ಲಿದೆ ಮಾಹಿತಿ

ವಾಹನ ಮಾದರಿಏಕಮುಖ ಸಂಚಾರರಿಟರ್ನ್ ಜರ್ನಿ
(24 ಗಂಟೆ ಒಳಗೆ)
ಸ್ಥಳೀಯ ವಾಹನಗಳಿಗೆತಿಂಗಳ ಪಾಸ್
ಕಾರ್‌/ಜೀಪ್‌/ವ್ಯಾನ್‌135 ರೂ205 ರೂ70 ರೂ4,425 ರೂ
ಎಲ್‌ಜಿವಿ, ಎಲ್‌ಸಿವಿ, ಮಿನಿ ಬಸ್‌220 ರೂ330 ರೂ110 ರೂ7,315 ರೂ
ಟ್ರಕ್‌/ಬಸ್‌460 ರೂ690 ರೂ230 ರೂ15,325 ರೂ
3 ಆಕ್ಸೆಲ್‌ ವಾಣಿಜ್ಯ ವಾಹನ500 ರೂ750 ರೂ250 ರೂ16,715 ರೂ
ಭಾರಿ ನಿರ್ಮಾಣ ಯಂತ್ರ/ ಬಹು ಆಕ್ಸೆಲ್‌ ವಾಹನಗಳು (4–6 ಆಕ್ಸೆಲ್‌)720 ರೂ1,080 ರೂ360 ರೂ24,030 ರೂ
ಅತಿ ಭಾರದ ವಾಹನಗಳು (7ಕ್ಕಿಂತ ಹೆಚ್ಚು ಆಕ್ಸೆಲ್‌) 880 ರೂ1,315 ರೂ440 ರೂ29,255 ರೂ

Latest Indian news

Popular Stories