ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನೆರವಾದ ಸರ್ಫರಾಜ್‌ ಆಕರ್ಷಕ ಶತಕ

ಪ್ರವಾಸಿ ಕಿವೀಸ್‌ ವಿರುದ್ದದ ಮೊದಲ ಟೆಸ್ಟ್‌ ನಲ್ಲಿ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ಸದ್ಯ ಉಸಿರಾಡುವ ಸ್ಥಿತಿ ತಲುಪಿದೆ. ಮೊದಲು ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅವರ ಅರ್ಧಶತಕದ ಬಳಿಕ ಯುವ ಆಟಗಾರ ಸರ್ಫರಾಜ್‌ ಖಾನ್‌ (Sarfaraz Khan) ಅವರು ಶತಕ ಸಿಡಿಸಿ ಟೀಂ ಇಂಡಿಯಾವನ್ನು ಅಪಾಯದಿಂದ ಬಹುತೇಕ ಪಾರು ಮಾಡಿದ್ದಾರೆ.

ಮೂರನೇ ದಿನದಾಟದ ಕೊನೆಯಲ್ಲಿ 70 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದ ಸರ್ಫರಾಜ್‌ ಖಾನ್‌ ಶನಿವಾರ (ಅ.19)ದ ಆಟದಲ್ಲಿ ಆಕರ್ಷಕ ಶತಕ ಬಾರಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಬಾರಿಸಿದ ಮೊದಲ ಶತಕ ಇದಾಗಿದೆ.ಸೌಥಿ ಎಸೆತದಲ್ಲಿ ಕವರ್‌ ಕಡೆಗೆ ಬೌಂಡರಿ ಬಾರಿಸುವ ಮೂಲಕ ಸರ್ಫರಾಜ್‌ ಖಾನ್‌ ಶತಕದ ಮೈಲಿಗಲ್ಲು ಸಾಧಿಸಿದರು. 110 ಎಸೆತಗಳಲ್ಲಿ ಸರ್ಫರಾಜ್‌ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಶತಕ ಪೂರ್ಣವಾದ ವೇಳೆ ಅವರು 13 ಬೌಂಡರಿ ಫೋರ್‌ ಮತ್ತು ಮೂರು ಸಿಕ್ಸರ್‌ ಬಾರಿಸಿದ್ದರು.

Latest Indian news

Popular Stories